ಅಸಭ್ಯ ರೀತಿಯಲ್ಲಿ ಯುವತಿಯರ ವಿಡಿಯೋ ತೆಗೆದು ಅಪ್ಲೋಡ್ ಮಾಡುತ್ತಿದ್ದ ಯುವಕನ ಬಂಧನ​

0
93

ಬೆಂಗಳೂರು: ಯುವತಿಯರ ವಿಡಿಯೋ ತೆಗೆದು ಇನ್​​ಸ್ಟಾಗ್ರಾಂನಲ್ಲಿ ಅಪ್ಲೋಡ್​ ಮಾಡುತ್ತಿದ್ದ ಯುವಕನನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ . ಮಣಿಪುರದ ಇಂಪಾಲ್ ಮೂಲದ ದಿಲವರ್ ಹುಸೇನ್ ​​(19) ಬಂಧಿತ ಯುವಕ. ಎಂ.ಜಿ.ರಸ್ತೆ, ಬ್ರಿಗೇಡ್ ರೋಡ್​ನಲ್ಲಿ ಯುವತಿಯರ ಅಸಭ್ಯ ರೀತಿಯಲ್ಲಿ ವಿಡಿಯೋ ತೆಗೆದು ಬಳಿಕ ಅಪ್ಲೋಡ್ ಮಾಡುತ್ತಿದ್ದ. ಈ ಸಂಬಂಧ ಅಶೋಕನಗರ ಠಾಣೆ ಪೊಲೀಸರು ಸುಮೋಟೋ ಕೇಸ್ ದಾಖಲಾಗಿದೆ.

ಯುವಕ ಹುಸೇನ್‌, ಬೆಂಗಳೂರಿನ ಕೊತ್ತನೂರಿನಲ್ಲಿ ವಾಸವಿದ್ದು, ಫುಡ್ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದ. ಯುವತಿಯರ ಅಸಭ್ಯ ವಿಡಿಯೋಗಳಿಗೆ ಸಾಂಗ್ ಹಾಕಿ ಎಡಿಟ್ ಮಾಡುತ್ತಿದ್ದ. ಬಳಿಕ Dilbar Jaani -64 ಎಂಬ ಇನ್​​ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುತ್ತಿದ್ದ. ಫೋಲೋವರ್ಸ್ ಹೆಚ್ಚಿಸಿಕೊಳ್ಳಲು ಈ ರೀತಿ ವಿಡಿಯೋ ಮಾಡುತ್ತಿದ್ದ ಎನ್ನಲಾಗಿದೆ.

LEAVE A REPLY

Please enter your comment!
Please enter your name here