ಮಂಗಳೂರು: ತಾಯಂದಿರು ಮತ್ತು ಮಕ್ಕಳ ಆರೋಗ್ಯವನ್ನು ಪೋಷಿಸುವ ತನ್ನ ಬದ್ಧತೆಯಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ಸ್ಥಾಪಿಸಿರುವ ಹಿಮಾಲಯ ಬೇಬಿಕೇರ್ ಸಂಸ್ಥೆ ದೇಶದಾದ್ಯಂತ 500ಕ್ಕೂ ಹೆಚ್ಚು ಸ್ತನ್ಯಪಾನ ಕೊಠಡಿಗಳನ್ನು ಯಶಸ್ವಿಯಾಗಿ ಸ್ಥಾಪಿಸಿದೆ ಎಂದು ಬೇಬಿಕೇರ್ ವಿಭಾಗ ನಿರ್ದೇಶಕ ಚಕ್ರವರ್ತಿ ಎನ್. ವಿ. ತಿಳಿಸಿದರು.
ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಆಸ್ಪತ್ರೆಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಆರಾಮವಾಗಿ, ಗೌರವಯುತವಾಗಿ ಮತ್ತು ಖಾಸಗಿಯಾಗಿ ಹಾಲುಣಿಸಲು ಅನುಕೂಲ ಮಾಡಿಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಕಳೆದ ಜೂನ್ ಹೊತ್ತಿಗೆ ದೇಶಾದ್ಯಂತ ಒಟ್ಟು 502 ಸ್ತನ್ಯಪಾನ ಕೊಠಡಿಗಳು ಕಾರ್ಯನಿರ್ವಹಿಸುತ್ತಿದೆ. ಮುಂಬೈ, ಹೈದರಾಬಾದ್, ಕೋಲ್ಕತ್ತಾ ಮತ್ತು ಗೋವಾದಂತಹ ಪ್ರಮುಖ ಕೇಂದ್ರಗಳು ಸೇರಿದಂತೆ ದೇಶದ 27 ವಿಮಾನ ನಿಲ್ದಾಣಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ಕರ್ನಾಟಕದಲ್ಲಿ, ಮಂಗಳೂರು ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಕೊಠಡಿಗಳನ್ನು ಸ್ಥಾಪಿಸಲಾಗಿದೆ ಎಂದು ಬೇಬಿಕೇರ್ ವಿಭಾಗ ನಿರ್ದೇಶಕ ಚಕ್ರವರ್ತಿ ಎನ್. ವಿ. ತಿಳಿಸಿದರು.
————————————————-