ಉಡುಪಿ : ಮಹಾಕಾಳಿ ಮಹಾಸಂಸ್ಥಾನ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿಯವರ ಜನ್ಮ ವರ್ಧಂತಿ ದಿನದಂದು ಸದ್ಧರ್ಮ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಸಂಘಟನೆಯ ಉಡುಪಿ ಘಟಕದ ವತಿಯಿಂದ ಬ್ರಹ್ಮಾವರದ ವೃದ್ದಾಶ್ರಮದಲ್ಲಿ ಅನ್ನ ದಾನ ಸೇವೆ ನಡೆಯಿತು. ಮುಖ್ಯ ಅತಿಥಿಗಳಾಗಿ ಮಂಜಣ್ಣ ಸೇವ ಬ್ರಿಗೇಡ್ ಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಮನೋಜ್ ಕೋಡಿಕೆರೆ ಉಡುಪಿಯ ಪ್ರಖ್ಯಾತ ಯುವ ಉದ್ಯಮಿ ಶ್ರೀಯುತ ಅಜಯ್ ಪುರುಷೋತ್ತಮ ಶೆಟ್ಟಿ ಉಪಸ್ಥಿತರಿದ್ದರು. ಸದ್ಧರ್ಮ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಮನೀಶ್ ಪೂಜಾರಿ ಶ್ರೀಯುತ ವಿಶಾಲ್ ಪೂಜಾರಿ ಸಂಘಟನೆಯ ಉಡುಪಿ ಘಟಕದ ಜಿಲ್ಲಾಧ್ಯಕ್ಷರಾದ ಯುವ ಉದ್ಯಮಿ ಶ್ರೀಯುತ ಅನಂತ್ ಕೃಷ್ಣ ಶ್ಯಾನ್ಭಾಗ್ ಉಪಾಧ್ಯಕ್ಷರಾದ ಸಂತೋಷ್ ನಂದಳಿಕೆ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಯುತ ವಿಶಾಲ್ ಪೂಜಾರಿ ಶ್ರೀಯುತ ಸ್ವರೂಪ್ ಶ್ರೀಯುತ ಹೇಮಂತ್ ಸಂಘಟನೆಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
Home Uncategorized ಉಡುಪಿ: ಸದ್ಧರ್ಮ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಸಂಘಟನೆ ವತಿಯಿಂದ ವೃದ್ಧಾ ಶ್ರಮದಲ್ಲಿ ಅನ್ನ ದಾನ...