ಬೆಳ್ತಂಗಡಿ: ತುಳುನಾಡು ಒಕೂಟ ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ 5ನೇ ವರ್ಷದ ಚೆನ್ನೆಮಣೆ ಗೊಬ್ಬು ಪಂಥ (ಚೆನ್ನೆಮನೆ ಆಟ ಸ್ಪರ್ಧೆ) ಆ. 10ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬೆಳ್ತಂಗಡಿಯ ಡಾ. ಬಿಆರ್. ಅಬೇಡ್ಕರ್ ಸಭಾಭವನದಲ್ಲಿ ನಡೆಯಲಿದೆ.
ತುಳುನಾಡು ಒಕ್ಕೂಟದ ಅಧ್ಯಕ್ಷರಾಗಿರುವ ಶೈಲೇಶ್ ಆರ್.ಜೆ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ. ಪುಷ್ಪಗಿರಿ, ಉದ್ಯಮಿ ಅಭಿನಂದನ್ ಹರೀಶ್ ಕುಮಾರ್, ನಿವೃತ್ತ ಶಿಕ್ಷಕಿ ಜಯಂತಿ ಸುಧಾರ್, ಉದಯವಾಣಿ ವರದಿಗಾರ ಚೈತ್ರೇಶ್ ಇಲಂತಿಲ, ಕರಂಬಾರು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪುಷ್ಪರಾಜ್ ಎಂ.ಕೆ., ಶೇಖರ್ ಗೌಡಂತಿಗೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ ನಡೆಯಲಿರುವ ಸಮಾರೋಪ ಕಾರ್ಯಕ್ರಮದಲ್ಲಿ ತುಳುನಾಡು ಒಕ್ಕೂಟ ತಾಲೂಕು ಕೂಟದ ಅಧ್ಯಕ್ಷ ರಾಜೇಶ್ ಕುಲಾಲ್ ಬೈರೊಟ್ಟು ಅವರು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಭಾರತ್ ಸ್ಕೌಟ್ಸ್ ಆಂಡ್ ಗೈಟ್ಸ್ ಅಧ್ಯಕ್ಷೆ ಪ್ರಮೀಳ, ಯಕ್ಷಗಾನ ಸಂಘಟಕ ನಿತಿನ್ ಕುಮಾರ್ ತೆಂಕಕಾರಂದೂರು, ಪತ್ರಕರ್ತ ಜಾರಪ್ಪ ಪೂಜಾರಿ ಬೆಳಾಲು, ಬಾಲಕೃಷ್ಣ ಶೆಟ್ಟಿ ಸಾಲಿಗ್ರಾಮ, ಎಂ.ಆರ್. ಪ್ರಸನ್ನ ಭಾಗವಹಿಸಲಿದ್ದಾರೆ ತುಳುನಾಡು ಒಕ್ಕೂಟದ ಕಾರ್ಯಾಧ್ಯಕ್ಷರಾಗಿರುವ ರಾಜು ಬಿ.ಎಚ್. ಅವರಿಗೆ ಸನ್ಮಾನ ಕಾರ್ಯಕ್ರಮವಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.