ಮುಲ್ಕಿ: ತಾಲೂಕು ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆ ಹಾಗೂ ಬೀಸಿದ ಗಾಳಿಗೆ ಶನಿವಾರ ಸಂಜೆ ಕೊಲಕಾಡಿ ಬಳಿ ಭಾರೀ ಗಾತ್ರದ ಅಶ್ವತ್ಥ ಮರ ವಿದ್ಯುತ್ ಕಂಬದ ಮೇಲೆ ಬಿದ್ದು ರಸ್ತೆಗೆ ಬಿದ್ದಿದೆ.
ವಿದ್ಯುತ್ ಕಂಬ ಬೀಳುವ ಹೊತ್ತಿನಲ್ಲಿ ಟೆಂಪೋ ಚಲಿಸುತ್ತಿದ್ದು ಅದರ ಚಾಲಕ ಕೆಂಪುಗುಡ್ಡೆ ನಿವಾಸಿ ತಾರಾನಾಥ ಪೂಜಾರಿ ಸಮಯಪ್ರಜ್ಞೆಯಿಂದ ವಾಹನ ಸಮೇತ ಪವಾಡ ಸದೃಶ ಪಾರಾಗಿದ್ದಾನೆ
ಈ ಸಂದರ್ಭ ಮುಲ್ಕಿ – ಕೊಲಕಾಡಿ- ಪಂಜಿನಡ್ಕ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.

ಕೂಡಲೇ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮನೋಹರ ಕೋಟ್ಯಾನ್ ನೇತೃತ್ವದಲ್ಲಿ ಮುಲ್ಕಿ ಮೆಸ್ಕಾಂ ಇಲಾಖೆಯ ಸಿಬ್ಬಂದಿ ಗಳು, ಸ್ಥಳೀಯರಾದ ಮೊಹಮದ್ ಅಕೀಬ್ ಖಾನ್, ಅಶ್ವಥ್ ಕೊಲಕಾಡಿ, ರಮನಾಥ ಶೆಟ್ಟಿ ರತ್ನಾಕರ ಪೂಜಾರಿ ಜಯರಾಜ್ ಶೆಟ್ಟಿ ಮತ್ತಿತರರು ಸೇರಿಕೊಂಡು ರಸ್ತೆಗೆ ಬಿದ್ದ ಮರವನ್ನು ಹಾಗೂ ವಿದ್ಯುತ್ ಕಂಬವನ್ನು ತೆರವುಗೊಳಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದ್ದಾರೆ.
ಭಾರೀ ಮಳೆ ಗಾಳಿಗೆ ಕಕ್ವ ಬಾನೊಟ್ಟು ಸೋಡಾ ಫ್ಯಾಕ್ಟರಿ ಬಳಿ 4 ವಿದ್ಯುತ್ ಕಂಬಗಳು ಧರಶಾಹಿಯಾಗಿದ್ದು ಈ ಭಾಗದಲ್ಲಿ ವಿಧ್ಯುತ್ ಅಸ್ತವ್ಯಸ್ತ ಉಂಟಾಗಿದ್ದು ಮೆಸ್ಕಾಂ ಇಲಾಖೆಗೆ ಭಾರೀ ನಷ್ಟ ಸಂಭವಿಸಿದೆ.