ಮಂಗಳೂರು: “ರೋಟರಾಕ್ಟ್ ಸಂಸ್ಥೆಯು ಕೇವಲ ಯುವಕರ ಅನುಕೂಲಕ್ಕಾಗಿ ಸ್ಥಾಪಿಸಿದ ಸಂಸ್ಥೆಯಾಗಿದ್ದು, ಯುವಕರ ನಾಯಕತ್ವ ಗುಣಗಳ ಬೆಳವಣಿಗೆ, ವ್ಯಕ್ತಿತ್ವ ವಿಕಸನಗಳನ್ನು ರೋಪಿಸುವ ಸಂಸ್ಥೆಯಾಗಿದ್ದು, ಯುವಕರು ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಸಮಾಜ ಸೇವಾ ಚಟುವಟಿಕೆಗಳಲ್ಲಿ ಒಗ್ಗಟ್ಟಾಗಿ ಶ್ರಮಿಸಿ ಯಶಸ್ಸು ಸಾಧಿಸಬೇಕು” ಎಂದು ರೋಟರಿ ಮಾಜಿ ಜಿಲ್ಲಾ ಜವರ್ನರ್ ಡಾ. ದೇವ್‌ದಾಸ್ ರೈ ಸಲಹೆ ನೀಡಿದ್ದಾರೆ. ಅವರು ತಾ: 28.07.2025 ರಂದು ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಜರಗಿದ ರೋಟರಾಕ್ಟ್ ಕ್ಲಬ್, ಮಂಗಳೂರು ಸಿಟಿ ಸಂಸ್ಥೆಯ ಪ್ರಸ್ತುತ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸದಸ್ಯರನ್ನು ಉದ್ದೇಶಿಸಿ ಮಾತನಾಡಿ, ನೂತನ ತಂಡಕ್ಕೆ ಶುಭ ಕೋರಿದರು.
ಪದಗ್ರಹಣ ಅಧಿಕಾರಿಯಾಗಿ ಆಗಮಿಸಿದ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷರಾದ ರೋ. ಭಾಸ್ಕರ್ ರೈಯವರು ಪದಗ್ರಹಣದ ವಿಧಿವಿಧಾನಗಳನ್ನು ನೆರವೇರಿಸಿ, ಪರಸ್ಪರ ಸ್ನೇಹ ವಿಶ್ವಾಸದಿಂದ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಿ, ನೂತನ ಸದಸ್ಯರನ್ನು ಸಂಸ್ಥೆಗೆ ಸೇರ್ಪಡಿಸಿ, ಬಲಪಡಿಸಿ ಎಂದು ತಂಡಕ್ಕೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡಿ ಯಶಸ್ಸು ಕೋರಿದರು.
ನಿರ್ಗಮಣ ಅದ್ಯಕ್ಷ ಬಿದ್ದಪ್ಪರವರು ಸ್ವಾಗತಿಸಿ ತಮ್ಮ ಅಧಿಕಾರ ಅವಧಿಯಲ್ಲಿ ಸಹಕಾರÀ ನೀಡಿದ ಸರ್ವ ಸದಸ್ಯರಿಗೆ ಕೃತಜ್ಷತೆ ಸಲ್ಲಿಸಿದರು. ನಿರ್ಗಮಣ ಕಾರ್ಯದರ್ಶಿ ಅಕ್ಷಯ್ ರೈ ವಾರ್ಷಿಕ ವರದಿ ಮಂಡಿಸಿದರು. ವಲಯ ಪ್ರತಿನಿಧಿ ಶಮನ್‌ರವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅಕ್ಷಯ್ ರೈಯವರು ಪ್ರಸ್ತುತ ಸಾಲಿನಲ್ಲಿ ಹಲವಾರು ವಸತಿ, ಆರೋಗ್ಯ, ಶಿಕ್ಷಣ, ಸಮಾಜದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜನಪರ ಸೇವಾ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದನ್ನು ಅನುಷ್ಠಾನಗೊಳಿಸಲು ಸರ್ವ ಸದಸ್ಯರ ಉತ್ಸಾಹ, ಪ್ರೋತ್ಸಾಹ ಕೋರಿದರು. ಈ ಸಂದರ್ಭದಲ್ಲಿ 13 ನೂತನ ಸದಸ್ಯರನ್ನು ಸಂಸ್ಥೆಗೆ ಸೇರ್ಪಡಿಸಲಾಯಿತು. ಕುಮಾರಿ ಕ್ರಿಶಾ ನಿರೂಪಿಸಿದ ಕಾರ್ಯಕ್ರಮದಲ್ಲಿ ನೂತನ ಕಾರ್ಯದರ್ಶಿ ವಿವೇಕ್ ರಾವ್ ವಂದಿಸಿದರು.
ಪದಾಧಿಕಾರಿಗಳ ವಿವರ: ಉಪಾಧ್ಯಕ್ಷ – ಸಾತ್ವಿಕ್ ಕೊಟೆಕಾರ್, ಕೋಶಾಧಿಕಾರಿ – ಮುಕೇಶ್ ಕರ್ಕೆರಾ, ದಂಡಾಧಿಕಾರಿ – ರಕ್ಷಣ್.
ನಿರ್ದೇಶಕರು: ಸಂಸ್ಥೆ ಸೇವೆ – ಮಣಿಕಂಠ, ವ್ರತ್ತಿಪರ ಸೇವೆ – ಪೌರ್ನಮಿ ಶೆಟ್ಟಿ, ಅಂತರಾಷ್ಟಿçÃಯ ಸೇವೆ – ಚಮನ್, ಸಮಾಜ ಸೇವೆ – ಚೇತನ್, ಗೃಹಪತ್ರಿಕೆ ಸಂಪಾಧಕಿ – ಕುಮಾರಿ ರಶ್ಮಿತ