ಕೇವಲ ಶಾಲಾಧ್ಯಯನದಿಂದ ಮಾತ್ರ ಸಂಸ್ಕೃತ ಭಾಷೆಯ ಉನ್ನತಿ ಅಸಾಧ್ಯ. ಸಂಭಾಷಣೆಯಿಂದ ಭಾಷೆಯ ರಕ್ಷಣೆ ಸಾಧ್ಯ. ಹಾಗಾಗಿ ಎಲ್ಲಾ ಸಂಸ್ಕೃತ ವಿದ್ಯಾರ್ಥಿಗಳು ಸಂಸ್ಕೃತದಲ್ಲಿಯೇ ವ್ಯವಹರಿಸಬೇಕೆಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಉಡುಪಿ ಜಿಲ್ಲಾ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘದಿಂದ ದಿನಾಂಕ 27-07-25ರಂದು ರಾಜಾಂಗಣದಲ್ಲಿ ಆಯೋಜಿಸಲ್ಪಟ್ಟ ಸಂಸ್ಕೃತೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಅನುಗ್ರಹ ಸಂದೇಶ ನೀಡಿದರು.ಸ್ವಾಮೀಜಿಯವರು ತಮ್ಮ ಮಾತು ಮುಂದುವರೆಸಿ, ದ್ವಿಭಾಷಾ ನೀತಿಯಿಂದ ಸಂಸ್ಕೃತ ಭಾಷೆಯನ್ನು ಕಡೆಗಣಿಸುವಂತಾಗಿದೆ ಎಲ್ಲಾ ಭಾರತೀಯ ಭಾಷೆಗಳ ತಾಯಿಯಾದ ಸಂಸ್ಕೃತವನ್ನು ನಾವಿಂದು ರಕ್ಷಿಸಬೇಕು, ರಾಷ್ಟ್ರಗೀತೆಯಲ್ಲಿ ಅನೇಕ ಸಂಸ್ಕೃತ ಶಬ್ದಗಳಿವೆ. ಅದನ್ನು ಅರ್ಥೈಸಿಕೊಳ್ಳಲು ಸಂಸ್ಕೃತದ ಜ್ಞಾನ ಅವಶ್ಯಕ .ಸಂಸ್ಕೃತ ಭಾಷೆಯನ್ನು ತಿರಸ್ಕರಿಸಿದರೆ ರಾಷ್ಟ್ರಗೀತೆಯನ್ನು ತಿರಸ್ಕರಿಸಿದಂತಾಗುತ್ತದೆ. ಬಹುಭಾಷಾ ಜ್ಞಾನದಿಂದ ಮಾತ್ರ ಪ್ರತಿಭೆ ವರ್ದಿಸುತ್ತದೆ .ಬಹುಭಾಷಾ ನೀತಿಗಾಗಿ ನಾವು ಸರ್ಕಾರವನ್ನು ಆಗ್ರಹಿಸುತ್ತೇವೆಂದು ಶ್ರೀಪಾದರು ಹೇಳಿದರು.
ಉಡುಪಿ ಜಿಲ್ಲಾ ಡಯಟ್ನ ಪ್ರಾಂಶುಪಾಲರಾದ ಡಾಕ್ಟರ್ ಅಶೋಕ್ ಕಾಮತ ಮಾತನಾಡಿ ಭಾಷಾ ರಾಜಕೀಯದಿಂದಾಗಿ ಆಯಾ ಸಂದರ್ಭದಲ್ಲಿ ಬೇರೆ ಬೇರೆ ತಿರುಗು ಪಡೆಯುತ್ತಿದೆ. ಹಿಂದೆ ರಾಜಾಶ್ರಯದಲ್ಲಿದ್ದ ಸಂಸ್ಕೃತವನ್ನು ದೂರ ಮಾಡುವ ಸ್ಥಿತಿ ಇಂದು ಬಂದಿದೆ . ದ್ವಿಭಾಷಾ ನೀತಿಯಿಂದ ಕನ್ನಡ-ಅಂಗ್ಲತರ ಭಾಷೆಗಳಿಗೆ ಆತಂಕ ಬಂದಿದೆ ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು .ಹಿರಿಯ ಲೆಕ್ಕಪರಿಶೋಧಕರಾದ ಶ್ರೀ ಕೆ. ಕಮಲಾಕ್ಷ ಕಾಮತ್ ಸಂದರ್ಭೋಚಿತವಾಗಿ ಮಾತನಾಡಿದರು .ಶ್ರೀ ರಾಮ ನಿರ್ಯಾಣ ಗಾನ ವ್ಯಾಖ್ಯಾನ ಕಾರ್ಯಕ್ರಮ ಈ ಸಂದರ್ಭದಲ್ಲಿ ನಡೆಯಿತು.ವಿದ್ವಾನ್ ಶಂಭು ಭಟ್ ಕೋಟ ಅವರು ಗಾನ ಹಾಗೂ ಡಾ. ರಾಘವೇಂದ್ರ ರಾವ್ ಪುಡುಬಿದ್ರಿ ಇವರು ವ್ಯಾಖ್ಯಾನವನ್ನು ನಡೆಸಿಕೊಟ್ಟರು. 2024- 25ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ 125,124 ಹಾಗೂ 100 ಮತ್ತು 99 ಅಂಕಗಳನ್ನು ಗಳಿಸಿದ 222 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಅವರನ್ನು ಸನ್ಮಾನಿಸಲಾಯಿತು.625 ಮತ್ತು 624 ಅಂಕಗಳನ್ನು ಪಡೆದ ಉಡುಪಿ ಜಿಲ್ಲೆಯ ನಿಧಿ ಪೈ ಎಂ, ಸ್ವಸ್ತಿ ಕಾಮತ್ ಮತ್ತು ಸುಶ್ಮಿತಾ ಎಸ್ ಗಾಣಿಗರನ್ನು ಶ್ರೀಗಳು ಸನ್ಮಾನಿಸಿದರು ಈ ಸಂದರ್ಭದಲ್ಲಿ ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಂಸ್ಕೃತ ಭಾರತೀ ಮಂಗಳೂರಿನ ಮುಖ್ಯಸ್ಥ ಡಾಕ್ಸರ್ ಎಚ್.ಆರ್. ವಿಶ್ವಾಸ ರವರು ವಿಶೇಷ ಉಪನ್ಯಾಸ ನೀಡಿದರು ಉಡುಪಿ ಜಿಲ್ಲೆಯ ಉಪನಿರ್ದೇಶಕರಾದ ಶ್ರೀ ಲೋಕೇಶ್. ಸಿ ಇವರು, ಕ್ಷೇತ್ರ ಶಿಕ್ಷಣಾಧಿಕಾರಗಳಾದ ಡಾಕ್ಟರ್ ಯಲ್ಲಮ್ಮ ಇವರು ಹಾಗೂ ಜಂಗಮಮಠದ ಡಾ. ನಿರಂಜನ ಚೋಳಯ್ಯ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ವಿದ್ವಾನ್ ನಟರಾಜ ಪಟ್ಟ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ವಿದ್ವಾನ್ ಪ್ರಭಾಕರ್ ಭಟ್ ಇನ್ನಂಜೆ ಸ್ವಾಗತಿಸಿದರು ವಿದ್ವಾನ್ ಅಶೋಕ ಹೆಗಡೆ ವಂದಿಸಿದರು. ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ನಿರೂಪಿಸಿದರು.