ಮುಲ್ಕಿ ಲಯನ್ಸ್ ಕ್ಲಬ್ ಬೆಂದೂರ್ ವೆಲ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನೆರವೇರಿತು. ಲಯನ್ ಮುರಳಿಧರ್ ಭಂಡಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಕಾರ್ಯದರ್ಶಿಯಾಗಿ ಲ ರವಿಕುಮಾರ್, ಖಜಾಂಚಿಯಾಗಿ ಲ ಪ್ರಾಣೇಶ್ ಕುಮಾರ್ ಹಾಗೂ ಮೆಂಬರ್ಶಿಪ್ ಚೇರ್ಮನ್ ಲ ಎನ್ ಜೆ ನಾಗೇಶ್ ಅಧಿಕಾರ ಸ್ವೀಕರಿಸಿದರು.ಪದಗ್ರಹಣಾಧಿಕಾರಿಯಾಗಿ ಅಂತರರಾಷ್ಟ್ರೀಯ ಲಯನ್ಸ್ ಜಿಲ್ಲೆ 317-ಡಿ ಯ ಲಯನ್ ವೆಂಕಟೇಶ ಹೆಬ್ಬಾರ್ ಚೀಪ್ ಕಾರ್ಡಿನೇಟರ್ ಫಾರ್ ಗ್ಲೋಬಲ್ ಕಾಸ್ ಮಾತನಾಡಿ
ಸೇವಾ ಸಂಸ್ಥೆಗಳು ಮನೋರಂಜನೆಗಾಗಿ ಅಲ್ಲ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಹಾಯ ಹಸ್ತದ ಮೂಲಕ ಮಾದರಿಯಾಗಿ ಸಂಸ್ಥೆಯ ಒಳಿತಿಗಾಗಿ ಶ್ರಮಿಸಿ ಸೇವಾ ಮನೋಭಾವನೆ
ಬೆಳೆಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂತ-2 ರ ಪ್ರಾಂತ್ಯಾಧ್ಯಕ್ಷರಾದ ಲ ಚರಣ್ ಆಳ್ವ ವಲಯಾಧ್ಯಕ್ಷರಾದ ಲ ಸುನಿಲ್ ಕುಮಾರ್ ಶೆಟ್ಟಿ, ಲ ಪ್ರತಿಭಾ ಹೆಬ್ಬಾರ್, ಲ ಎನ್ ಜೆ ನಾಗೇಶ್, ಲ ದೇರಣ್ಣ, ಲ ಹರೀಶ್ ಮಲ್ಯ, ಸ್ಥಾಪಕ ಸದಸ್ಯ ರಾದ ಅನಂತ್ ಸೇಟ್ ಕಾರ್ಯಕ್ರಮ ನಿರೂಪಿಸಿದರು.