ಸೂಟರ್‌ಪೇಟೆ: ಆ. 27ರಂದು 7ನೇ ವರ್ಷದ ಗಣೇಶೋತ್ಸವ

0
277

ಮಂಗಳೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೂಟರ್‌ ಪೇಟೆ 7ನೇ ವರ್ಷದ ಗಣೇಶೋತ್ಸವ ಆಚರಣೆಯು ಆ. 27ರಂದು ಸೂಟರ್‌ ಪೇಟೆಯ ಶ್ರೀ ಕೋರ್ದಬ್ಬು ದೈವಸ್ಥಾನದ ಶ್ರೀ ಬಬ್ಬುಸ್ವಾಮಿ ರಂಗಮಂದಿರದಲ್ಲಿ ಜರಗಲಿದೆ.

ಆ. ೨೬ರಂದು ಶ್ರೀ ಗಣಪತಿ ವಿಗ್ರಹವನ್ನು ಮಂಟಪಕ್ಕೆ ತರಲಾಗುತ್ತದೆ. ಆ. ೨೭ರಂದು ಬೆಳಿಗ್ಗೆ ಪ್ರಾರ್ಥನೆ, ಸ್ಥಳಶುದ್ದಿ, ಗಣಹೋಮ ಬಳಿಕ ಶ್ರೀ ಮಹಾಗಣಪತಿ ದೇವರ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಸಂಜೆ ೫-೩೦ಕ್ಕೆ ವಿಶೇಷ ರಂಗಪೂಜೆ ಬಳಿಕ ವಿಸರ್ಜನಾ ಪೂಜೆ ನಡೆಯಲಿದೆ.

ಶೋಭಾಯಾತ್ರೆ

ಶ್ರೀ ಗಣಪತಿ ದೇವರ ವಿಜ್ರಂಭನೆಯ ಶೋಭಾಯಾತ್ರೆಯು ಸೂಟರ್‌ ಪೇಟೆ-ವೆಲೆನ್ಸಿಯಾ ವೃತ್ತ -ಸೂಟರ್‌ ಪೇಟೆ ಮುಖ್ಯ ರಸ್ತೆಯಲ್ಲಿ ಸಾಗಿ ಫಿಶರೀಸ್‌ ಕಾಲೇಜಿನ ಕೆರೆಯಲ್ಲಿ ವಿಸರ್ಜನೆಗೊಳಿಸಲಾಗುವುದು ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here