ಮಣಿಪಾಲ: ಮಹಿಳಾ ಸಮಾಜ ಮಣಿಪಾಲ ಇದರ 63ನೇ ಸ್ಥಾಪಕ ದಿನಾಚರಣೆ ರೋಟರಿ ಹಾಲ್ ಮಣಿಪಾಲ ಇಲ್ಲಿ ಇತ್ತೀಚಿಗೆ ನೆಡೆಯಿತು.
ಮುಖ್ಯ ಅತಿಥಿಯಾಗಿ ಮಣಿಪಾಲ ಮಾಹೆಯ ವಸಂತಿ ರಾಮದಾಸ್ ಪೈ. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಮಹಿಳಾ ಸಮಾಜ ಮಣಿಪಾಲ ಇದರ ಸ್ಥಾಪಕರಾದ ದಿ. ಶಾರದ ಪೈ, ಡಾ. ಪದ್ಮ ರಾವ್ ಇವರ ಭಾವಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸಿದರು. ಮುಖ್ಯ ಅತಿಥಿಯಾದ ಡಾ. ರಾಜಶ್ರೀ ಎಸ್. ಕಿಣಿ ಯವರು ಸಮಾಜದ ವಿವಿಧ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದ ಮಹಿಳೆಯರಾದ ನಾರಾಯಣಿ ನಾಯಕ್ , ಸಪ್ನಾ ಸಾಲಿನ್ಸ್ , ಏಕ್ತಾ ಜೈನ್ , ಪ್ಲಾವಿಯಾ ಮೆಂಡೋಂಕಾ ರವರನ್ನು ಗೌರವಿಸಿ ಮಾತನಾಡಿದರು.
ಮಹಿಳೆಯರು ದೈನಂದಿನ ಕೆಲಸ ಕಾರ್ಯದ ಜೊತೆ ಆರೋಗ್ಯದ ಹೆಚ್ಚಿನ ಗಮನ ಹರಿಸಬೇಕು ಎಂದು ಕರೆ ನೀಡಿದರು. ವೇದಿಕೆಯಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ಶೃತಿ ಶೆಣೈ , ಉಪಾಧ್ಯಕ್ಷೆ ವೈ. ಜಯಂತಿ ಕಾಮತ್ , ಕಾರ್ಯದರ್ಶಿ ವಿಜಯಲಕ್ಷ್ಮೀ , ಸಹ ಕಾರ್ಯದರ್ಶಿ ಏಕ್ತ ಜೈನ , ಖಂಚಾಚಿ ಶಾಲಿನಿ ಜಿ ನಾಯಕ್ , ರೇಷ್ಮಾ ತೋಟ ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ಜರಗಿತು.