ಉಡುಪಿ:ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ೧೨ನೇ ವಾರ್ಷಿಕೋತ್ಸವ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದವರ ಅಭಿನಂದನಾ ಕಾರ್ಯಕ್ರಮ ಗುರುವಾರ ನಡೆಯಿತು.
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ಮಾತನಾಡಿ, ಜಾತಿ, ಮತ, ಧರ್ಮವನ್ನು ಮೀರಿ ಜೀವ ಉಳಿಸಲು ಅಗತ್ಯವಾದ ರಕ್ತ ಸೌಹಾರ್ದಕ್ಕೆ ಪೂರಕವಾಗಿದೆ. ಹಸಿವು ಮುಕ್ತ ಜಗತ್ತು ರೂಪಿಸುವ ಹಾದಿಯಲ್ಲಿ ಬಡವರಿಗೆ ನೆರವು ಸಹಿತ ಮಲಬಾರ್ ಗೋಲ್ಡ್ ಸಂಸ್ಥೆಯ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದು ಹೇಳಿದರು.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ಮುಖ್ಯಸ್ಥ ಹಫೀಝ್ ರೆಹಮಾನ್ ಮಾತನಾಡಿ, ಸಂಸ್ಥೆಯ ಲಾಭಾಂಶದಲ್ಲಿ ಶೇ. 5 ಮೊತ್ತವನ್ನು ಮಲಬಾರ್ ಚಾರಿಟೇಬಲ್ ಟ್ರಸ್ಟ್ ಮೂಲಕ ಹೆಣ್ಮಕ್ಕಳಿಗೆ ವಿದ್ಯಾರ್ಥಿ ವೇತನ, ಹಸಿವು ಮುಕ್ತ ಜಗತ್ತು, ಅಜ್ಜಿ ಮನೆ, ಮೈಕ್ರೋ ಲರ್ನಿಂಗ್ ಸೆಂಟರ್ ಮೂಲಕ ದೇಶದಲ್ಲಿ ೨೮೨ ಕೋಟಿ ರೂ. ಹಾಗೂ ಕರ್ನಾಟಕದಲ್ಲಿ ೪೦.೮೮ಕೋಟಿ ರೂ. ವಿನಿಯೋಗಿಸಲಾಗಿದೆ ಎಂದು ನುಡಿದರು.
ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಮುಖ್ಯಸ್ಥೆ ಡಾ. ವೀಣಾ ಕುಮಾರಿ, ಮುಂಡ್ಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಸುರೇಂದ್ರ ಶೆಟ್ಟಿ, ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಫ್ರಾಂಕ್ಲಿ ಡಿಸೋಜಾ ಮಾತನಾಡಿದರು.
ಒಟ್ಟು 118 ಯುನಿಟ್ ಸಂಗ್ರಯಿಸಲಾಯಿತು.
ನವ ರಕ್ತದಾನಿಗಳಿಗೆ ಅಭಿನಂದನೆ: ದಿಶಾನ್ ಪೂಜಾರಿ, ಶಾಂತಾರಾಮ್ ಮೊಗವೀರ, ವಿನುತಾ ಕಿರಣ್, ಜಯರಾಜ್ ಸಾಲ್ಯಾನ್, ಅಬ್ದುಲ್ ಹಮೀದ್ ಉಚ್ಚಿಲ, ನಿತ್ಯಾನಂದ ಅಮೀನ್, ಚೇತು ಶಂಕರಪುರ, ಝಾಕಿರ್ ಹುಸೇನ್, ಶ್ರೀನಿವಾಸ್ ಪ್ರಸಾದ್ ಮಯ್ಯ ಅವರನ್ನು ಅತಿ ಹೆಚ್ಚು ರಕ್ತದಾನ ಮಾಡಿ ಸಮಾಜಕ್ಕೆ ನೀಡಿದ ಕೊಡುಗೆ, ಪ್ರೇರಣೆಗಾಗಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ವ್ಯವಸ್ಥಾಪಕರಾದ ಪುರಂದರ ತಿಂಗಳಾಯ,ಮುಸ್ತಫಾ ಎ.ಕೆ ,ಗುರುರಾಜ್, ತಂಝೀಮ್ ಶಿರ್ವ ಉಪಸ್ಥಿತರಿದ್ದರು,
ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.