ದಾವಣಗೆರೆ: ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಕಳೆದ 4 ದಶಕಗಳಿಂದ ಸಾಂಸ್ಕೃತಿಕ ನಗರಿಯನ್ನಾಗಿ ಪರಿವರ್ತನೆಯೊಂದಿಗೆ ನಿರಂತರವಾಗಿ ಕಠಿಣ ಪರಿಶ್ರಮದೊಂದಿಗೆ ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ ಸೇರಿದಂತೆ ಅಪ್ಪಟ ಕನ್ನಡ ಭಾಷೆಯನ್ನು ವೈಭವೀಕರಿಸಿದ “ದಾವಣಗೆರೆಯ ಸಾಂಸ್ಕೃತಿಕ ರಾಯಭಾರಿ” ಮತ್ತು “ದಾವಣಗೆರೆಯ ಯಕ್ಷಗಾನ ರಾಯಭಾರಿ” ಎಂದೇ ಪ್ರಖ್ಯಾತರಾದ ಪ್ರಾಥಮಿಕ ಶಾಲೆಗೆ ಸೀಮಿತರದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಯಾವುದೇ ಸ್ವಾರ್ಥವಿಲ್ಲದೇ ಅಪಾರ ಜ್ಞಾನದೊಂದಿಗೆ ಸಮಾಜವನ್ನು ಉಜ್ವಲಗೊಳಿಸಿದ ಅದ್ವಿತೀಯ ಪ್ರತಿಭೆ ಅವರ ಸಾಧನೆಗಳನ್ನು ಗುರುತಿಸಿ “ಸಾಧಕ ವಿಭೂಷಣ” ಅಂತರಾಷ್ಟಿçÃಯ ಪ್ರಶಸ್ತಿಯನ್ನು ಇತ್ತೀಚಿಗೆ ಆನ್‌ಲೈನ್‌ನಲ್ಲಿ ಅಂತರಾಷ್ಟ್ರೀಯ ಕವಿಗೋಷ್ಠಿ ಹಾಗೂ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿತರಿಸಲಾಯಿತು ಎಂದು ನಾಗರಮನೋಳಿಯ ಕವಿತ್ತಕರ್ಮಮಣಿ ಪೌಂಡೇಶನ್ ಅಧ್ಯಕ್ಷರಾದ ಲಾಲಸಾಬ ಹೆಚ್. ಪೆಂಡಾರಿ ತಿಳಿಸಿದ್ದಾರೆ.
ಶೆಣೈಯವರ ಈ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಬಿಚ್ಕತ್ತಿ ಕುಟುಂಬ, ಕಲಾಕುಂಚ, ಯಕ್ಷರಂಗ, ಸಿನಿಮಾಸಿರಿ, ಶ್ರೀ ಗಾಯಿತ್ರಿ ಪರಿವಾರ, ಕರ್ನಾಟಕ ಸಗಮ ಸಂಗೀತ ಪರಿಷತ್, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ಗೌಡಸಾರಸ್ವತ ಸಮಾಜ, ದಾವಣಗೆರೆ ಜಿಲ್ಲಾ ಛಾಯಗ್ರಾಹಕ ಸಂಘ, ಕರಾವಳಿ ಮಿತ್ರ ಮಂಡಳಿ ಮುಂತಾದ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.