ಬೆಂಗಳೂರಿನಲ್ಲಿ ಮೋಹನ್ ಹೊಸ್ಮಾರ್ ಗೆ ಸನ್ಮಾನ

0
25

ಬೆಂಗಳೂರಿನ ಅರಮನೆ ನಗರದಲ್ಲಿಜುಲೈ 30 ರಂದು ನಡೆದ *ಚಿತ್ರಸಂತೆ – 2025ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ( ಜಾನಪದ ಕ್ಷೇತ್ರದ ಸಾಂಸ್ಕೃತಿಕ ಪರಂಪರೆ ) *ವರ್ಷದ ಕನ್ನಡಿಗ – Star A chiever Award – 2025* ಪ್ರಶಸ್ತಿಯನ್ನು ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಕನ್ನಡ ಅಧ್ಯಾಪಕರಾದ ಮೋಹನ್ ಹೊಸ್ಮಾರ್ ಇವರು ಪಡೆದುಕೊಂಡರು. ಜಾನಪದ ಕಲೆಗಳ ಉಳಿವಿಗಾಗಿ ಕಳೆದ 14 ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿರುವ ಇವರ ಕಾರ್ಯಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಶ್ರೀ ಶಾರದಾ ನಾಟ್ಯಾಲಯ , ಮೂಡುಬಿದಿರೆ ಎಂಬ ಕಲಾಸಂಸ್ಥೆಯ ನಿರ್ದೇಶಕರಾಗಿ, ವಿದ್ಯಾರ್ಥಿಗಳಿಗೆ ಜಾನಪದ ಕಲೆ, ನಾಟಕ ಹೀಗೆ ವಿವಿಧ ಕಲಾಪ್ರಕಾರಗಳ ತರಬೇತಿಯನ್ನು ನೀಡಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳಿಗೂ ವಿದ್ಯಾರ್ಥಿಗಳನ್ನು ತಯಾರುಗೊಳಿಸುವ ಕಲಾಚತುರರಿವರು. ತಾನು ಬೆಳೆಯುವುದರ ಜೊತೆಗೆ ಇತರರನ್ನೂ ಬೆಳೆಸುವ ಇವರ ಗುಣ, ಅದೆಷ್ಟೋ ವಿದ್ಯಾರ್ಥಿ ಕಲಾವಿದರನ್ನು ತಯಾರು ಮಾಡುತ್ತಿರುವ ಇವರ ಶಿಕ್ಷಣದ ಜೊತೆಗಿ‌ನ ಕಲಾಬದುಕು ಎಲ್ಲರಿಗೂ ಮಾದರಿಯಾಗಿದೆ. ಎಲ್ಲಾ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕನಾಗಿ ಶಿಕ್ಷಣದ ಜೊತೆಗೆ ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನೇ ತನ್ನ ಹವ್ಯಾಸವನ್ನಾಗಿಸಿ ಉಳಿಸಿ ಬೆಳೆಸುವ ಇವರ ಕಾರ್ಯ ಶ್ಲಾಘನೀಯ.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here