ಬಿ ಎಸ್ ಎನ್ ಡಿ ಪಿ ಉಡುಪಿ ಜಿಲ್ಲಾ ಘಟಕದಿಂದ ಜಿಲ್ಲಾ ಮಟ್ಟದಲ್ಲಿ ನಡೆಯುವ ಶ್ರೀ ನಾರಾಯಣ ಗುರು ಜಯಂತ್ಯೋತ್ಸವದ ಪೂರ್ವಭಾವಿ ಸಭೆಯನ್ನು ಒಂದು ತಿಂಗಳ ಮುಂಚಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ.ಕೆ ಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿ ಎಸ್ ಎನ್ ಡಿ ಪಿ ಜಿಲ್ಲಾ ಅಧ್ಯಕ್ಷರಾದ ಶ್ರೀಧರ್ ಅಮೀನ್, ಪ್ರಧಾನ ಕಾರ್ಯದರ್ಶಿ ರಾಕೇಶ್ ಪೂಜಾರಿ ವರ್ವಾಡಿ, ಗೌರವ ಸಲಹೆಗಾರರಾದ ಅಮೃತಾ ಪೂಜಾರಿ, ಪ್ರವೀಣ್ ಉದ್ಯಾವರ, ರಮೇಶ್ ಕೋಟ್ಯಾನ್ ಮಣಿಪುರ, ದಾಸ ಅಮೀನ್ ಕೊರಂಗ್ರಪಾಡಿ, ಕಿಶೋರ್ ಪೆರ್ಡೂರ್, ಅಕ್ಷಿತ್ ಸಾಲ್ಯಾನ್, ಸುಕುಮಾರ್ ಪೂಜಾರಿ ಉಪಸ್ಥಿತರಿದ್ದರು.