ಅಳದಂಗಡಿ: ಆಮಂತ್ರಣ ಸೇವಾ ಪ್ರತಿಷ್ಠಾನ ರಿ.ಅಳದಂಗಡಿ ಇದರ ಸಾರಥ್ಯದಲ್ಲಿ
ಲಯನ್ಸ್ ಕ್ಲಬ್ ಬೆಳ್ತಂಗಡಿ ಇವರ ಸಹಯೋಗದೊಂದಿಗೆ
ತುಳುನಾಡು ಒಕ್ಕೂಟ ಬೆಳ್ತಂಗಡಿ, ಲಯನ್ಸ್ ಕ್ಲಬ್ ಸುಲ್ಕೇರಿ, ಸದ್ಧರ್ಮ ಯುವಕ ಮಂಡಲ ಕುದ್ಯಾಡಿ, ಶಿವನಾಗ ಫ್ರೆಂಡ್ಸ್ ಕುದ್ಯಾಡಿ, ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿ ಬಳಂಜ ಇವುಗಳ ಸಹಕಾರದಲ್ಲಿ
ಆ.3 ರಂದು ಆದಿತ್ಯವಾರ ಅಳದಂಗಡಿ ಕೆದ್ದು ದೀಪಾ ಸಭಾಂಗಣದಲ್ಲಿ
ಚೆನ್ನೆಮಣೆ ಸ್ಪರ್ಧೆ ಮತ್ತು ತುಳುಸಿಂಗಾರ ಕಾರ್ಯಕ್ರಮ ನಡೆಯಲಿರುವುದು.
ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಚೆನ್ನೆಮಣೆ , ಶಾಲಾ ಮಕ್ಕಳಿಗೆ ಚಿತ್ರಬಿಡಿಸುವ ಸ್ಪರ್ಧೆ, ಹಾಗೂ ತುಳು ಹಾಡು ಇನ್ನಿತರ ಆಟಗಳು, ಯಕ್ಷನೃತ್ಯ, ಪಾಡ್ದನ ಮತ್ತು ಬಳಂಜ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿ ಇವರಿಂದ ಕುಣಿತಾ ಭಜನೆ, ಆತ್ಮ ಕಮಲೇಶ್ ಅಳದಂಗಡಿ ಇವರ ಕಲಾಸರಸ್ವತಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿರುವುದು ಎಂದು ಆಮಂತ್ರಣ ಪ್ರತಿಷ್ಠಾನದ ಅಧ್ಯಕ್ಷರಾದ ವಿಜಯ ಕುಮಾರ್ ಜೈನ್
ತಿಳಿಸಿದ್ದಾರೆ.