ವೇಣೂರು: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಅತ್ಯಧಿಕವಾಗಿ ದೇಣಿಗೆ ನೀಡಿ ಸಹಕಾರ ನೀಡಿರುವ ವೇಣೂರು ಮಹಾವೀರ ನಗರದ ನಿವಾಸಿ ಕಮಲ ಬಂಗೇರ (ದಿ. ಗೋಪು ಮಡಿವಾಳರ ಧರ್ಮಪತ್ನಿ) ಅವರು ಇತ್ತೀಚೆಗೆ ನಿಧನರಾಗಿದ್ದು, ದೇವಸ್ಥಾನದ ವತಿಯಿಂದ ಅವರ ಶ್ರದ್ಧಾಂಜಲಿ ಸಭೆಯು ಆ. 3ರಂದು ದೇಗುಲದ ವಠಾರದಲ್ಲಿ ನಡೆಯಲಿದೆ ಎಂದು ದೇಗುಲದ ವ್ಯವಸ್ಥಾಪನ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಪ್ರಕಟಣೆ ತಿಳಿಸಿದೆ.