ಮೂಡುಬಿದಿರೆ : ಬ್ಯಾಂಕ್ ಖಾತೆಯನ್ನು ಸಕ್ರಿಯವಾಗಿ ಉಳಿಸಲು ಕೆವೈಸಿ ನವೀಕರಿಸವುದು ಅಗತ್ಯ – ಶ್ರೀ ಬಿ.ಸುಧಾಕರ ಕೊಟ್ಟಾರಿ ಜನರಲ್ ಮ್ಯಾನೇಜರ್ ಕೆನರಾ ಬ್ಯಾಂಕ್ ಪ್ರಧಾನ ಕಛೇರಿ(ಸಿಪಿಚ್)*
.ಇವರು ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ನಲ್ಲಿ ಜನ ಸುರಕ್ಷಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಅನೇಕ ಸೌಲಭ್ಯಗಳಾದ ಸಾಮಾಜಿಕ ಭದ್ರತಾ ಯೋಜನೆಗಳ ಜನರಿಗೆ ಪಡೆಯಲು ಬ್ಯಾಂಕ್ ಖಾತೆ ಅವಶ್ಯಕ ಅದರೊಂದಿಗೆ ಕಾಲಕ್ಕೆ ಸರಿಯಾಗಿ ಕೆವೈಸಿ ನವೀಕರಿಸವುದು ಖಾತೆಗೆ ನಾಮನಿರ್ದೇಶನ (ನಾಮಿನಿ) ನೀಡುವುದು ಅತ್ಯವಶ್ಯಕ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೇಮಾ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶೈಲೇಂದ್ರನಾಥ್ ಶೀಥ್ ಡಿಜಿಎಂ ಕೆನರಾ ಬ್ಯಾಂಕ್ ವೃತ್ತ ಕಛೇರಿ ಮಂಗಳೂರು, ಶ್ರೀಮತಿ ಲತಾ ಕುರುಪು ಡಿಜಿಎಂ, ಪ್ರಾದೇಶಿಕ ಕಛೇರಿ ಕೆನರಾ ಬ್ಯಾಂಕ್ ಮಂಗಳೂರು. ಕವಿತಾ ಎನ್ ಶೆಟ್ಟಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ದಕ್ಷಿಣ ಕನ್ನಡ, ಪ್ರಶಾಂತ್ ಶೆಟ್ಟಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ದೀಪು ಶಾಖಾ ವ್ಯವಸ್ಥಾಪಕರು ಕೆನರಾ ಬ್ಯಾಂಕ್ ಕಲ್ಲಮುಂಡ್ಕೂರು, ತುಷಾಂತ್ ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿ ಮಂಗಳೂರು, ವಿಜಯಾ ಕಾಮತ್ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಪ್ರಜ್ವಾತ ವ್ಯವಸ್ಥಾಪಕಿ , ಎನ್ ಆರ್ ಎಲ್ ಎಂ , ಸುರಕ್ಷಿತ ಡಿಜಿಟಲ್ ವ್ಯವಹಾರ,ಜನ ಸುರಕ್ಷಾ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಸುಕನ್ಯಾ ಸಮೃದ್ಧಿ ಖಾತೆ,ಜನ್ – ಧನ್ ಖಾತೆ ಹಾಗೂ ಇತರೆ ಬ್ಯಾಂಕಿಂಗ್ ಸೌಲಭ್ಯಗಳ ಮಾಹಿತಿಯನ್ನು ಲತೇಶ್ ಬಿ ಆರ್ಥಿಕ ಸಾಕ್ಷರತಾ ಅಮೂಲ್ಯ ಮಂಗಳೂರು ಸಮಾಲೋಚಕರು ನೀಡಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ನೋಂದಣಿ,ಮರು ಕೆವೈಸಿ, ಶಿಕ್ಷಣ ಸಾಲ , ಗೃಹ ಸೌಲಭ್ಯಗಳ ಮಂಜೂರಾತಿ ಪತ್ರ ನೀಡಲಾಯಿತು.