ರಸ್ತೆಗುಂಡಿಗೆ ಸಿಲುಕಿ ಸ್ಕೂಟರ್ ಸಮೇತ ಬಿದ್ದ ವ್ಯಕ್ತಿ, ಹಿಂದಿನಿಂದ ಕಾರು ಹರಿದು ಸಾವು!

0
16

ಪುಣೆ: ಭಾರತದ ಬಹುತೇಕ ನಗರಗಳು ಕಳಪೆ ರಸ್ತೆ, ಅಲ್ಲಲ್ಲಿ ಗುಂಡಿಗಳಿಂದಾಗಿ ವಾಹನ ಸವಾರರಿಗೆ ನರಕಸದೃಶವಾಗಿದೆ. ಈ ಘಟನೆ ಪುಣೆಯಲ್ಲಿ ನಡೆದಿದೆ.  ಅಪಘಾತದಲ್ಲಿ ಹಲವು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದೇ ರೀತಿಯ ಘಟನೆ ಪುಣೆಯಲ್ಲೂ ನಡೆದಿದೆ. ರಸ್ತೆಗುಂಡಿಗೆ ಸಿಲುಕಿ ಆಯತಪ್ಪಿ ಸ್ಕೂಟರ್ ಸಮೇತ ಬಿದ್ದ ವ್ಯಕ್ತಿಯ ಮೇಲೆ ಕಾರು ಹರಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ವ್ಯಕ್ತಿಯನ್ನು 61 ವರ್ಷದ ಜಗನ್ನಾಥ್ ಕಾಶಿನಾಥ್ ಕೇಲ್ ಎಂದು ಗುರುತಿಸಲಾಗಿದ್ದು, ಅವರು ತಮ್ಮ ಸ್ಕೂಟರ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ನಗರದ ಔಂಧ್ ಪ್ರದೇಶದ ರಾಹುಲ್ ಹೋಟೆಲ್ ಬಳಿ ಅಪಘಾತ ಸಂಭವಿಸಿದೆ. ಹತ್ತಿರದ ಅಂಗಡಿಗಳ ಸ್ಥಳೀಯರು ಕೇಲ್‌ಗೆ ಸಹಾಯ ಮಾಡಲು ಧಾವಿಸಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಆದರೆ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. 2024 ರಲ್ಲಿ ನಗರದಲ್ಲಿ ಒಟ್ಟು 1,404 ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 320 ಜನರು ಸಾವನ್ನಪ್ಪಿದ್ದಾರೆ. 2023 ರಲ್ಲಿ ಒಟ್ಟು ಅಪಘಾತಗಳ ಸಂಖ್ಯೆ 1,230 ಆಗಿತ್ತು.

LEAVE A REPLY

Please enter your comment!
Please enter your name here