ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಶಿವರಾಮ ನಾಯ್ಕರ ಚಿಕಿತ್ಸೆಗೆ ಬೇಕಿದೆ ದಾನಿಗಳ ಸಹಾಯಹಸ್ತ

0
16

ಪುತ್ತೂರು: ಬಾಡಿಗೆ ಜೀಪಿನಲ್ಲಿ ಚಾಲಕ ವೃತ್ತಿ ಮಾಡಿಕೊಂಡು ಪ್ರಯಾಣಿಕರಿಗೆ ಸಾರಥಿಯಾಗಿದ್ದ ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ನೀರಮೂಲೆ ನಿವಾಸಿಯಾದ ಶಿವರಾಮ ನಾಯ್ಕರು ಇದೀಗ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಮಂಗಳೂರಿನ ಅಥೆನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಇವರ ಬಡ ಕುಟುಂಬಕ್ಕೂ ಇವರೇ ಸಾರಥಿಯಾಗಿದ್ದರು. ಇವರ ಅನಾರೋಗ್ಯ ಇವರ ಕುಟುಂಬಕ್ಕೆ ದಿಕ್ಕು ತೋಚದಾಗಿದೆ. ಈಗಾಗಲೇ ಸುಮಾರು ನಾಲ್ಕು ಲಕ್ಷದಷ್ಟು ಹಣ ಖರ್ಚಾಗಿದ್ದು , ಮುಂದಿನ ಚಿಕಿತ್ಸೆಗೆ ಸುಮಾರು 5 ಲಕ್ಷ ರೂಪಾಯಿ ಅಗತ್ಯವಿದೆ. ಈಗ ಕುಟುಂಬ ನಿರ್ವಹಣೆಯೇ ಕಷ್ಟವಾಗಿರುವ ಇವರಿಗೆ ಇಷ್ಟೊಂದು ಮೊತ್ತದ ಹಣ ಹೊಂದಾಣಿಕೆ ಮಾಡುವುದು ಕನಸಿನ ಮಾತಾಗಿದೆ. ಇದೀಗ ಕುಟುಂಬ ದಾನಿಗಳ ಸಹಾಯ ಯಾಚಿಸಿದ್ದು, ಬಡ ಕುಟುಂಬದ ಶಿವರಾಮ ನಾಯ್ಕರ ಚಿಕಿತ್ಸೆಗೆ ಆರ್ಥಿಕವಾಗಿ ನೆರವಾಗುವವರು A/C Name: Harish naik, A/No: 02482610001616, Bank name: Canara bank IFSC code: CNRB0010248, Contact no: 6360267569
UPI/G pay: 7899583613 ಪಾವತಿ ಮಾಡಬಹುದು ಅಥವಾ ಅಥವಾ ಮೊಬೈಲ್‌ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here