ಮಲಯಾಳಂ ಚಲನಚಿತ್ರ ನಟ ಮತ್ತು ಮಿಮಿಕ್ರಿ ಕಲಾವಿದ ಕಲಾಭವನ್ ನವಾಸ್ (51) ಶುಕ್ರವಾರ ಸಂಜೆ ಕೊಚ್ಚಿಯ ಚೊಟ್ಟನಿಕ್ಕರದಲ್ಲಿರುವ ಹೋಟೆಲ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಿಟಿಐ ಪ್ರಕಾರ, ಹೋಟೆಲ್ ಸಿಬ್ಬಂದಿ ನಟನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದ ನಂತರ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಪಿಟಿಐಗೆ ಪೊಲೀಸರು ನೀಡಿದ ವರದಿಯ ಪ್ರಕಾರ ಕಲಾಭವನ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಪೊಲೀಸರು ಹೃದಯಾಘಾತ ಎಂದು ಶಂಕಿಸಿದ್ದಾರೆ. ದಿ ಹಿಂದೂ ವರದಿಯ ಪ್ರಕಾರ, ಸಾವಿಗೆ ನಿಖರವಾದ ಕಾರಣವನ್ನು ನಿರ್ಧರಿಸಲು ಶನಿವಾರ ಕಲಾಮಸ್ಸೇರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ನಂತರ ಅವರ ಶವವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎನ್ನಲಾಗಿದೆ.