ಶಿಮಂತೂರು: ಸೇವಾಭಾವನೆ, ಶಿಸ್ತಿನ ಜೀವನ ಶೈಲಿ ವ್ಯಕ್ತಿತ್ವ ವಿಕಾಸಕ್ಕೆ ಎನ್ ಎಸ್ ಎಸ್ ಪೂರಕ: ಡಾ. ರಾಘವೇಂದ್ರ ಹೊಳ್ಳ

0
22

ಮುಲ್ಕಿ: ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯುಳ್ಳ ಸೇವಾಭಾವನೆ, ಶಿಸ್ತಿನ ಜೀವನ ಶೈಲಿ ವ್ಯಕ್ತಿತ್ವ ವಿಕಾಸಕ್ಕೆಎನ್ ಎಸ್ ಎಸ್ ಪೂರಕ ಎಂದು ಮಂಗಳೂರಿನ ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ನ ಅಧ್ಯಕ್ಷ ಡಾ. ರಾಘವೇಂದ್ರ ಹೊಳ್ಳ ಹೇಳಿದರು.
ಶಿಮಂತೂರಿನ ಶ್ರೀ ಶಾರದಾ ಶಾಲೆಯಲ್ಲಿ ಕರಾವಳಿ ಕರ್ನಾಟಕ ಭಾಗದ ಮೊದಲ ಪ್ರೌಢ ಶಾಲಾ ಮಟ್ಟದ ರಾಷ್ಟ್ರೀಯ ಸೇವಾ ಯೋಜನಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಶಾರದ ಸೊಸೈಟಿಯ ಅಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಅಧ್ಯಕ್ಷೆತೆ ವಹಿಸಿ ಮಾತನಾಡಿದರು. ಸೊಸೈಟಿಯ ಕೋಶಾಧಿಕಾರಿ ಕೆ ಭುವನಾಭಿರಾಮ ಉಡುಪ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಸುಮನ
ಶಾಲಾ ಸಂಚಾಲಕರಾದ ದೇವಪ್ರಸಾದ್ ಪುನರೂರು ಪ್ರಾಂಶುಪಾಲ ಜಿತೇಂದ್ರ ವಿ ರಾವ್,ಯೋಜನಾಧಿಕಾರಿ ಐಶ್ವರ್ಯ, ಉಪಪ್ರಾಂಶುಪಾಲೆ ದಿವ್ಯ ಟಿ ಶೆಟ್ಟಿ, ಸಹ ಶಿಕ್ಷಕಿ ಶ್ರೀವಿದ್ಯಾ ಮತ್ತಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here