ಮೂಡುಬಿದಿರೆ: ಸಪಲಿಗರ ಹಾಗೂ ಗಾಣಿಗರ ಸೇವಾ ಸಂಘ (ರಿ.) ಗಾಣಿಗರ ಯುವಕರ ಒಕ್ಕೂಟ ಹಾಗೂ ಮಹಿಳಾ ಒಕ್ಕೂಟ ಮೂಡುಬಿದಿರೆ ಆಶ್ರಯದಲ್ಲಿ 14ನೇ ವರ್ಷದ ಆಟಿಡ್ ಕೆಸರ್ಡೊಂಜಿ ದಿನ ಕಾರ್ಯಕ್ರಮವು ಆ. 3ರಂದು ಕಾಂತಾವರ ಬಾರಾಡಿ ಶಾಲೆ ಬಳಿಯ ಗದ್ದೆಯಲ್ಲಿ ಜರಗಲಿದೆ.
ಕಾಂತಾವರ ಕ್ಷೇತ್ರದ ಧರ್ಮದರ್ಶಿ ಡಾ. ಜೀವಂಧರ ಬಲ್ಲಾಲ್ ಬಾರಾಡಿ ಬೀಡು ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಪಲಿಗರ ಹಾಗೂ ಗಾಣಿಗರ ಸೇವಾ ಸಂಘ ಅಧ್ಯಕ್ಷರಾದ ರಾಜೇಶ್ ಬಂಗೇರ ಸಮಾರಂಭದ ಉದ್ಘಾಟನೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದಯ ಕುಮಾರ್ ಶೆಟ್ಟಿ ಮುನಿಯಾಲು, ದೇವಿಪ್ರಸಾದ್ ಶೆಟ್ಟಿ ಸಾಣೂರು, ಧರ್ಮರಾಜ ಕೆ. ಕಂಬಳಿ ಕಾಂತಾವರ ಹಾಗೂ ರಾಜೇಶ್ ಕೋಟ್ಯಾನ್ ಕಾಂತಾವರ ಅವರು ಭಾಗವಹಿಸಲಿದ್ದಾರೆ.