ಮೂಡುಬಿದಿರೆ ಶ್ರೀ ಮಹಾವೀರ ಪ.ಪೂ.ಕಾಲೇಜು: ವ್ಯಸನ ಮುಕ್ತ ಸಮಾಜ ಕಾರ್ಯಕ್ರಮ

0
21

ಮೂಡುಬಿದಿರೆ: ಶ್ರೀ ಮಹಾವೀರ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಮೂಡಬಿದಿರೆ ತಾಲೂಕು ಆಡಳಿತ ಪೂಜ್ಯಶ್ರೀ ಶ್ರೀ ಮ.ನಿ.ಪ್ರ.ಡಾ. ಮಹಾಂತ ಶಿವಯೋಗಿ ಸ್ವಾಮೀಜಿ ಇವರ ಜನ್ಮದಿನದ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಹಾವೀರ ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪ್ರವೀಣ್ ಭಂಡಾರಿ ಅವರು ಮಾತನಾಡುತ್ತಾ , ನಮ್ಮ ದೇಶದಲ್ಲಿ ಸಾಕಷ್ಟು ಯುವ ಜನರು ಇದ್ದಾರೆ. ಆದರೆ ಮದ್ಯ ವ್ಯಸನ ಎಂಬ ಪಿಡುಗಿಗೆ ಅನೇಕ ಜೀವ ಬಲಿಯಾಗುತ್ತಿದೆ. ನಮ್ಮಲ್ಲಿರುವ ಮಾನವ ಸಂಪನ್ಮೂಲಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಸಮಾಜದಲ್ಲಿರುವ ಯುವಜನತೆ ಹಾದಿ ತಪ್ಪಲಾರರು. ನಾವು ನಮ್ಮ ದೇಶದಲ್ಲಿ ಬದಲಾವಣೆಯನ್ನು ತರಬೇಕಾದರೆ ಯುವ ಜನತೆ ಕೈಜೋಡಿಸಬೇಕು. ಈಗಾಗಲೇ ಹಲವಾರು ವ್ಯಸನ ಮುಕ್ತ ಘಟಕಗಳನ್ನು ರಚಿಸಿ ಅವುಗಳ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ವಿದಾರ್ಥಿಗಳು ಯಶಸ್ವಿಯಾಗಿ ಮಾಡುತ್ತಿದ್ದಾರೆ ಎಂಬುದಾಗಿ ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ವ್ಯಸನ ಮುಕ್ತ ಸಮಾಜದ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲೆಫ್ಟಿನೆಂಟ್ ವಿಜಯಲಕ್ಷ್ಮೀ ಇವರು ಮಾತನಾಡುತ್ತಾ ಸಮಾಜ ಹಾಗೂ ದೇಶವನ್ನು ಹಾಳು ಮಾಡುವ ದುರ್ವ್ಯಸನಗಳು, ದುಶ್ಚಟಗಳಿಗೆ ವಿದ್ಯಾರ್ಥಿಗಳು ತಾವು ಬಲಿ ಬೀಳದೆ ವ್ಯಸನ ಪರಿಣಾಮದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಪರಿವರ್ತಿಸುವ ಕೆಲಸ ಮಾಡಬೇಕು. ವ್ಯಸನಮುಕ್ತ ಸಮಾಜ ನಿರ್ಮಾಣದ ಹೊಣೆ ನಮ್ಮೆಲ್ಲರದು. ಪೂಜ್ಯ ಸ್ವಾಮೀಜಿಯವರ ಕನಸು ಇದೇ ಆಗಿತ್ತು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮೂಡುಬಿದರೆ ತಾಲೂಕಿನ ಉಪತಹಸೀಲ್ದಾರರು ಬಾಲಕೃಷ್ಣ, ಕಂದಾಯ ನಿರೀಕ್ಷಕರು ಮಂಜುನಾಥ್, ಎಫ್.ಡಿ.ಎ ಮಲ್ಲೇಶ್, ಬೆಳುವಾಯಿ ವಿ.ಎ ಮಹೇಶ್, ಮೂಡುಬಿದರೆ ವಿ.ಎ ಶ್ರೀನಿವಾಸ್, ಚುನಾವಣಾ ಸಿಬ್ಬಂದಿ ಕೇಶವ್, ಕಚೇರಿ ಸಹಾಯಕರು ಪ್ರಕಾಶ್ ಹಾಗೂ ಪದವಿ ಕಾಲೇಜಿನ ಗಣಿತಶಾಸ್ತ್ರದ ಮುಖ್ಯಸ್ಥರಾದ ಡಾ. ಹರೀಶ್ ಉಪಸ್ಥಿತರಿದ್ದರು. ಪದವಿ ಪೂರ್ವ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕಿ ಸುಜಾತ ನಿರೂಪಿಸಿದರು.

LEAVE A REPLY

Please enter your comment!
Please enter your name here