ಮೂಡುಬಿದಿರೆ: ಕಳೆದ ಹಲವು ವರುಷಗಳಿಂದ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಫೈನಾನ್ಸ್ ಆಫೀಸರ್ ಆಗಿ ದುಡಿದಿದ್ದ ರಾಜೇಶ್ ನಾಯ್ಕ ಅವರು ಗುರುವಾರ ಬೆಳ್ಮ ಣ್ ಕಾಡಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕಾರ್ಕಳ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಜೇಶ್ ನಾಯ್ಕ ಮೂಲತಃ ಕಾಪು ನಿವಾಸಿಯಾಗಿದ್ದು, ಪತ್ನಿ, ಒಂದು ಮಗು ಹಾಗೂ ಬಂಧುಗಳನ್ನು ಅಗಲಿದ್ದಾರೆ.