ಹೊಸಂಗಡಿ: ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ

0
4

ಹೊಸಂಗಡಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ BC ಟ್ರಸ್ಟ್ ಗುರುವಾಯನಕೆರೆ ಹೊಸಂಗಡಿ ವಲಯದ,ಬಡಕೋಡಿ ಕರಿಮನೇಲು ಒಕ್ಕೂಟದ ವತಿಯಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು ವೇದಮೂರ್ತಿ ಶ್ರೀರಾಮ ದಾಸ ಆಶ್ರನ್ನ ಇವರ ಪೌರೋಹಿತ್ಯದಲ್ಲಿ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಪಡ್ಯಾರ ಬೇಟ್ಟು ಅನುವಂಶಿಯ ಆಡಳಿತದಾರರಾದ ಶ್ರೀ ಎ ಜೀವಂದರ್ ಕುಮಾರ್ ರವರು ಸಭಾ ಅಧ್ಯಕ್ಷತೆಯನ್ನು ವಹಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧ್ಯೇಯ ಉದ್ದೇಶ ಹಾಗೂ ಅದರಿಂದ ಆಗಿರುವಂತಹ ಸಾಮಾಜಿಕ ಬದಲಾವಣೆಯ ಬಗ್ಗೆ ಹಾಗೂ ಪೂಜ್ಯರು ಜನರಿಗೆ ಕೊಟ್ಟಿರುವ ಸಹಕಾರದ ಬಗ್ಗೆ ಮನನ ಮಾಡಿದರು.

ಧಾರ್ಮಿಕ ಉಪನ್ಯಾಸಕಿಯಾದ ಶ್ರೀಮತಿ ಅನಿತಾ ಶೆಟ್ಟಿ ಅವರು ವರಮಹಾಲಕ್ಷ್ಮಿ ಪೂಜೆಯ ಮಹತ್ವ ಹಾಗೂ ಅದರ ಆಚರಣೆಯಿಂದ ಆಗುವ ಬದಲಾವಣೆಯ ಬಗ್ಗೆ ಮಹಿಳೆಯರಿಗೆ ಮನಮುಟ್ಟುವಂತೆ ಮಾಹಿತಿ ನೀಡಿದರು.

ಗುರುವಾಯನಕೆರೆ ತಾಲೂಕಿನ ಯೋಜನಾಧಿಕಾರಿಯಾದ ಶ್ರೀಯುತ ಅಶೋಕ್ ಬಿ ಅವರು ಯೋಜನೆಯ ವಿವಿಧ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು ಹಾಗೂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಯುತ ಆನಂದ ಬಂಗೇರ ಹಾಗೂ ವರಮಹಾ ಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ವಸಂತಿಯವರು, ಹಾಗೂ ಒಕ್ಕೂಟದ ಅಧ್ಯಕ್ಷರಾದ ರೋಹಿತ್ ಹಾಗೂ ದಿನಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಹಾಗೂ ಮೇಲ್ವಿಚಾರಕರಾದ ವೀಣಾ ಸ್ವಾಗತಿಸಿದರು ಕಾರ್ಯದರ್ಶಿಯಾದ ಸೌಮ್ಯರವರು ವರದಿ ವಾಚಿಸಿದರು ವೇಣೂರು ವಲಯದ ಮೇಲ್ವಿಚಾರಕರಾದ ಶಾಲಿನಿ ಅವರು ಧನ್ಯವಾದ ಮಾಡಿದರು.

LEAVE A REPLY

Please enter your comment!
Please enter your name here