ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಹಾಗೂ ಲಯನ್ಸ್ ಕ್ಲಬ್ ಕೃಷ್ಣಾಪುರದಿಂದ ಸೂಚನಾ ಫಲಕ ಕೊಡುಗೆ

0
15

ದಕ್ಷಿಣ ಕನ್ನಡ ಜಿಲ್ಲಾ ಉನ್ನತೀಕರಿಸಿದ ಪ್ರೌಢಶಾಲೆ ಕೆ ಎಸ್ ರಾವ್ ನಗರ ಮುಖ್ಯೋಪಾಧ್ಯಾಯರು ಹಾಗೂ ಸ್ಥಳಿಯ ನಾಗರಿಕರ ಮನವಿ ಮೇರೆಗೆ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಹಾಗೂ ಲಯನ್ಸ್ ಕ್ಲಬ್ ಕಾಟಿಪಳ್ಳ ಕೃಷ್ಣಾಪುರ ದಿಂದ ಶಾಲಾ ವಠಾರ ನಿಧಾನವಾಗಿ ಚಲಿಸಿ ಸೂಚನಾ ಫಲಕವನ್ನು ದಕ್ಷಿಣ ಕನ್ನಡ ಜಿಲ್ಲಾ ಉನ್ನತೀಕರಿಸಿದ ಪ್ರೌಢಶಾಲೆ ಕೆ ಎಸ್ ರಾವ್ ನಗರ ಇಲ್ಲಿಯ ಮುಖ್ಯರಸ್ತೆಯಲ್ಲಿ ಅಳವಡಿಸಲಾಯಿತು.

ಈ ಸಂದರ್ಭ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನ ಅಧ್ಯಕ್ಷರಾದ ಅನಿಲ್ ಕುಮಾರ್ ಸ್ಥಾಪಕ ಅಧ್ಯಕ್ಷ ವೆಂಕಟೇಶ ಹೆಬ್ಬಾರ್, ಪ್ರತಿಭಾ ಹೆಬ್ಬಾರ್, ಭಾಸ್ಕರ್ ಕಾಂಚನ್, ಕಾಮೇಶ್ವರಿ ಲಯನ್ಸ್ ಕ್ಲಬ್ ಕಾಟಿಪಲ್ಲದ ಅಧ್ಯಕ್ಷರಾದ ಲೋಕೇಶ್ ಕುರುವನ್, ಶೆರಿಲ್ ಪಿಂಟೋ, ಪ್ರಶಾಂತ್ ಶೆಟ್ಟಿ, ಆನಂದ ಅಮೀನ್, ತಳಿಯ ಮಾಜಿ ಕೌನ್ಸಿಲರ್ ಬಶೀರ್ ಕುಲಾಯಿ ಶಾಲಾ ಅಭಿವೃದ್ಧಿಯ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಮುಖ್ಯೋಪಾಧ್ಯಾಯರಾದ ದಿನೇಶ್ ಕೆ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಕಾಮೇಶ್ವರಿ ಭಟ್, ಶಿಕ್ಷಕರುಗಳಾದ ಸುಜಾತ ಭಟ್ ಶ್ರೀದೇವಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here