ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಪ್ರಯುಕ್ತ ಆಷಾಡ ತಿಂಡಿ ತಿನಿಸುಗಳ ಪ್ರದರ್ಶನ ಹಾಗೂ ಹಿರಿಯರಿಗೆ ಸನ್ಮಾನ

0
6

ಶ್ರೀ ಭೋಜು ಪೂಜಾರಿ ಚಾರಿಟೇಬಲ್ ಟ್ರಸ್ಟ್ (ರಿ), ಬೆಚ್ಚಳ್ಳಿ ಇವರ ಆಶ್ರಯದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಪ್ರಯುಕ್ತ ಆಷಾಡ ತಿಂಡಿ ತಿನಿಸುಗಳ ಪ್ರದರ್ಶನ ಹಾಗೂ ಹಿರಿಯರಿಗೆ ಸನ್ಮಾನ ಕಾರ್ಯಕ್ರಮವು ದಿನಾಂಕ 02.08.2025 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಾಪುರದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿದ್ದಾಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಕೃಷ್ಣ ಪೂಜಾರಿಯವರು ಹಿಂದೆ ನಾವೆಲ್ಲ ಮನೆಯಲ್ಲೇ ಮಾಡಿದ ಹಳ್ಳಿ ತಿನಿಸುಗಳನ್ನು ತಿಂದು ಬೆಳೆದವರು, ಈಗಿನ ಮಕ್ಕಳು ಅಂಗಡಿಗಳಲ್ಲಿ ಸಿಗುವ ಕೆಮಿಕಲ್ ಬಳಸಿ ತಯಾರಿಸಿದ ತಿಂಡಿ ತಿನಿಸುಗಳನ್ನು ತಿಂದು ಬಹು ಬೇಗನೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಆದ್ದರಿಂದ ಮನೆಯ ಆಹಾರಕ್ಕೆ ಹೆಚ್ಚಿನ ಮಹತ್ವ ಕೊಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ರೂವಾರಿ ಭೋಜ ಪೂಜಾರಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ರಾಜೇಂದ್ರ ಬೆಚ್ಚಳ್ಳಿಯವರು ಮಾತನಾಡಿ ಕೃಷಿ ಮೂಲದಿಂದ ಬಂದವನಾದ ನಾನು ಇಂದಿನ ಕಾಲದ ಮಕ್ಕಳಿಗೆ ಕೃಷಿ ಮಹತ್ವ ಮತ್ತು ಆಷಾಢ ಮಾಸದ ತಿಂಡಿ ತಿನಿಸುಗಳ ಮಹತ್ವವನ್ನು ತಿಳಿಸುವುದಕ್ಕಾಗಿ ಇಂದಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಪ್ರತಿಯೊಬ್ಬರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ವಹಿಸಿದ್ದರು, ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸೋಮ ನಾಯ್ಕ, ಸಿದ್ದಾಪುರ ವಲಯ ಸಿ.ಆರ್.ಪಿ ಪ್ರಭಾಕರ ಶೆಟ್ಟಿ, ಶಾಲಾ ವಾರ್ಷಿಕೋತ್ಸವ ಹಾಗೂ ಕಟ್ಟಡ ಸಮಿತಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ನಾರಾಯಣ ಮಾಸ್ಟರ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಸತೀಶ್ ಕುಮಾರ್ ಶೆಟ್ಟಿ, ಸಿದ್ದಾಪುರ ವಲಯ ಅಂಗನವಾಡಿ ಮೇಲ್ವಿಚಾರಕಿ ಶಕುಂತಳ ಎಚ್.ಬಿ, ನಿವೃತ್ತ ಅಧ್ಯಾಪಕ ಶ್ರೀಕಾಂತ್ ರಾವ್,ಸಿದ್ದಾಪುರ ಗ್ರಾಮ ಪಂಚಾಯತ್ ಸದಸ್ಯರಾದ ಗೋಪಾಲ ಶೆಟ್ಟಿ ಕೊಡ್ಗಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಐದು ಜನ ಗ್ರಾಮದ ಹಿರಿಯರನ್ನು ಸನ್ಮಾನಿಸಲಾಯಿತು, ಶಿಕ್ಷಕ ಶ್ರೀಧರ್ ಐತಾಳ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here