ಮೂಲ್ಕಿ: ನಾರಾಯಣ ಗುರುಗಳು ಜನರ ಮನಸ್ಸಿನಲ್ಲಿ ಜ್ಞಾನದ ಬಿತ್ತನೆ ಮಾಡಿದವರು, ಅತ್ಮವೇಪರಮಾತ್ಮ ಎಂಬ ನಂಬಿಕೆಯಿಂದ ತಾವು ಸ್ಥಾಪಿಸಿದ ದೇವಸ್ಥಾನಲ್ಲಿ ಮೂರ್ತಿಯ ಬದಲಿಗೆ ದೀಪ ಕನ್ನಡಿಯನ್ನು ಇಟ್ಟರು, ಮತಾಂತರವಾಗುದನ್ನು ನಿಲ್ಲಿಸಿದರು, ಶಿಕ್ಷಣ, ಕೈಗಾರಿಕೆ ವ್ಯವಸಾಯಗಳನ್ನು ಮುಂದಿಟ್ಟು ಆದರ್ಶ ವ್ಯಕ್ತಿಯಾಗಿ ಬದುಕಿದವರು ಎಂದು ಜನಪದ ವಿದ್ವಾಂಸ, ಡಾ.ವೈ.ಎನ್ ಶೆಟ್ಟಿ ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯ, ಬ್ರಹ್ಮಶ್ರೀ ನಾರಾಯಣಗುರು ಅಧ್ಯಾಯನ ಪೀಠ, ಮಂಗಳಗಂಗೋತ್ರಿ ಇವರ ಸಂಯೋಜನೆಯಲ್ಲಿ ನಿನಾದ ತುಳು ಸಂಸ್ಕೃತಿ ಅದ್ಯಯನ ಕೇಂದ್ರ ಪಾವಂಜೆ ಇದರ ಅಶ್ರಯದಲ್ಲಿ ಕೃಷಿನಿನಾದ ನೇಗಿಲ ಯೋಗ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಹಿಂದಿನಕಾಲದ ಸರಿ ಮುಗುಳಿ ಆದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ವಿದ್ಯಾರ್ಥಿಗಳಿಗೆ ನಾಟಿ ಗದ್ದೆಯಲ್ಲಿ ಕಳೆ ತೆಗೆಯುವ ಕಾರ್ಯವನ್ನು ಕಲಿಸಿಕೊಡಲಾಯಿತು. ಈ ಸಂದರ್ಭ ಉದ್ಯಮಿ ಕಡಂಬೋಡಿ ಮಹಾಬಲ ಪೂಜಾರಿ, ಕಾಟಿಪಳ್ಳ ನಾರಾಯಣಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದಯಾಕರ್, ಲ.ಯಾದವ ದೇವಡಿಗ, ಮೂಲ್ಕಿ ನಾರಾಯಣಗುರು ಶಿಕ್ಷಣ ಸಂಸ್ಥೆಯ ಚಾಲಕ ಬಾಲಚಂದ್ರ ಸನಿಲ್, ಮೆಸ್ಕಾಂ ನ ಯಶೋಧರ ಸಾಲಿಯಾನ್ ಹಳೆಯಂಗಡಿ, ವಸಂತಿ ದೇವಡಿಗ, ಮಂಗಳೂರು ವಿಶ್ವವಿದ್ಯಾನಿಲಯ ನಾರಾಯಣ ಅದ್ಯಯನ ಪೀಠದ ನಿರ್ದೇಶಕ ಡಾ ಜಯರಾಜ್ ಅಂಚನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷ ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಭವ ಸಂಕಮಾರ್ ನಿರೂಪಿಸಿದರು. ಜಯಂತಿ ಸಂಕಮಾರ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಭಾಗವಹಿಸಿದರು.