ಸುವರ್ಣ ಕರ್ನಾಟಕ ರಾಜ್ಯ ಸಮಿತಿ ಜೈ ಭೀಮ್ ಯುವ ಸೇನೆ ಮೂಡುಬಿಗೆರೆ ತಾಲೂಕು ಘಟಕದ ವತಿಯಿಂದ ಆಗಸ್ಟ್ ಮೂರರಂದು ಸಮಾಜ ಮಂದಿರದಲ್ಲಿ ಉಚಿತ ದಂತ ಚಿಕಿತ್ಸೆ, ಕಣ್ಣಿನ ಪರೀಕ್ಷೆ, ಹಾಗೂ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಯಿತು. ಶಿಬಿರವನ್ನು ಮಂಗಳೂರು ದೇರಳಕಟ್ಟೆಯ ಏನಪೋಯಾ ವೈದ್ಯಕೀಯ ಕಾಲೇಜು, ಆಸ್ಪತ್ರೆ, ಗ್ರಂಥಿ ಸಂಸ್ಥೆ, ದಂತ ಕಾಲೇಜು ಗಳ ಸಂಯುಕ್ತ ಆಶ್ರಯದಲ್ಲಿ ನಡೆಯಿತು. ಶಿಬಿರವನ್ನು ದೀಪ ಬೆಳಗಿ ಉದ್ಘಾಟಿಸಿದ ಯುವ ಸೇನೆಯ ಸಂಸ್ಥಾಪಕ ಹಾಗೂ ರಾಜ್ಯ ಅಧ್ಯಕ್ಷ ವರ್ತೂರು ಮಂಜುನಾಥ್ ಮಾತನಾಡಿ ಸಾಮಾನ್ಯ ಜನರಿಗೆ ಇಂತಹ ಶಿಬಿರಗಳಿಂದ ಬಹಳಷ್ಟು ಉಪಕಾರಗಳಿವೆ ಎಂದು ತಿಳಿಸಿದರು. ವೇದಿಕೆಯಲ್ಲಿ ಏನಪೋಯ ಸಂಸ್ಥೆಯ ಡಾಕ್ಟರ್ ಅಬ್ದುಲ್ ಅಜೀಜ್, ಠಾಣಾಧಿಕಾರಿ ಕೃಷ್ಣಪ್ಪ, ಮಂಗಳೂರಿನ ಸುನಿಲ್, ರಾಜೇಶ್ ಕೊಟ್ಟಾರಿ, ಗಂಟಾಲ್ಕಟ್ಟೆಯ ಶ್ವೇತಾ ಹಾಜರಿದ್ದರು. ಇದೇ ಸಂದರ್ಭದಲ್ಲಿ ಮೂಡುಬಿದಿರೆ ತಾಲೂಕು ಘಟಕದ ವಿವಿಧ ಪದಾಧಿಕಾರಿಗಳಿಗೆ ನೇಮಕಾತಿ ಪತ್ರವನ್ನು ವಿತರಿಸಲಾಯಿತು.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ