ಸಿಎಂ ಜೊತೆ ಸಭೆ ಶುರು; ಮಾತುಕತೆ ವಿಫಲವಾದರೆ ಇವತ್ತು ಮಧ್ಯರಾತ್ರಿಯಿಂದ ಕೆಎಸ್​ಆರ್​ಟಿಸಿ ಬಂದ್!

0
44

ಬೆಂಗಳೂರು: ಸಾರಿಗೆ ನೌಕರರ ಸಂಸ್ಥೆಯ ಪ್ರತಿನಿಧಿಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಸಭೆ ಶುರುವಾಗಿದೆ ಮತ್ತು ಮಾತುಕತೆ ಫಲ ಕಾಣದೆ ಹೋದರೆ ಇವತ್ತು ಮಧ್ಯರಾತ್ರಿಯಿಂದ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್ ಸೇವೆ ನಿಲ್ಲಲಿದೆ.

ಬಿಎಂಟಿಸಿ ಬಸ್​ಗಳಲ್ಲಿ ಓಡಾಡುವ ಲಕ್ಷಾಂತರ ಜನರಿಗೆ ಮುಷ್ಕರದಿಂದ ತೊಂದರೆಯಾಗಲಿದ್ದು, ಪ್ರತಿಭಟನೆ ನಡೆಸುತ್ತಿರೋದು ಜನರಿಗೋಸ್ಕರ ದಯವಿಟ್ಟು ತಮ್ಮೊಂದಿಗೆ ಸಹಕರಿಸುವಂತೆ ಸಂಘದ ಪದಾಧಿಕಾರಿಗಳು ಭಿತ್ತಿಪತ್ರಗಳನ್ನು ಹಂಚಿ ವಿನಂತಿ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ತಮ್ಮ ಬೇಡಿಕೆಗಳನ್ನು ಅಸಡ್ಡೆ ಮಾಡುತ್ತಿದೆ, ವೇತನ ಪರಿಷ್ಕರಣೆ, ಹಿಂಬಾಕಿಯ ಬಿಡುಗಡೆ ಮತ್ತು 2021ರಲ್ಲಿ ಸಾರಿಗೆ ನೌಕರರ ವಿರುದ್ಧ ದಾಖಲಿಸಿದ್ದ ಪ್ರಕರಣಗಳನ್ನು ಹಿಂಪಡೆದುಕೊಳ್ಳುವುದು ತಮ್ಮ ಪ್ರಮುಖ ಬೇಡಿಕೆಗಳಾಗಿವೆ ಎಂದು ಹೇಳಿದರು.

LEAVE A REPLY

Please enter your comment!
Please enter your name here