ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನಿಂದ ಆಟಿಡೊಂಜಿ ದಿನ

0
31

ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲಾ ಉನ್ನತೀಕರಿಸಿದ ಪ್ರೌಢಶಾಲೆ ಕೆ ಎಸ್ ರಾವ್ ನಗರ ಇಲ್ಲಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಆಶ್ರಯದಲ್ಲಿ ಆಟಿಡೊಂಜಿ ದಿನ ಹಾಗೂ ಪೌಷ್ಟಿಕ ಆಹಾರ ಅಭಿಯಾನ ಯಶಸ್ವಿಯಾಗಿ ಆಯೋಜಿಸಲಾಯಿತು.

ತುಳುನಾಡಿನ ಹಿಂದಿನ ಕಾಲದ ಆಷಾಢ ಮಾಸದಲ್ಲಿ ತಿನ್ನುವ ತಿಂಡಿ ತಿನಿಸು ಸೊಪ್ಪು ಗೆಡ್ಡೆ ಗೆಣಸುಗಳ ಆಹಾರ ಖಾದ್ಯಗಳನ್ನು ಅಲ್ಲದೆ ವಿಶೇಷವಾಗಿ ಉತ್ತರ ಕರ್ನಾಟಕದ ಆಹಾರ ವೈವಿದ್ಯವನ್ನು ಸರಕಾರಿ ಶಾಲೆಯ ಮಕ್ಕಳ ಪೋಷಕರು ತಯಾರಿಸಿ ತಂದು ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಅತಿಥಿಗಳಿಗೆ ಹಂಚಲಾಯಿತು. ಮುಖ್ಯೋಪಾಧ್ಯಾಯರಾದ ದಿನೇಶ್ ಕೆ ಪ್ರಾಸ್ತಾವಿಕ ಮಾತಿನೊಂದಿಗೆ ಸರ್ವರನ್ನು ಸ್ವಾಗತಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮುಲ್ಕಿಯ ಪ್ರಥಮ ಪ್ರಜೆ ಸತೀಶ ಅಂಚನ್ ಮಾತನಾಡಿ , ನಾವು ಈಗಾಗಲೇ ಅನೇಕ ಜಾತಿ ಸಂಘಟನೆಗಳಲ್ಲಿ ಈ ಕಾರ್ಯಕ್ರಮವನ್ನು ನೆರವೇರಿಸುತ್ತಿದ್ದು ಅದು ಸೀಮಿತ ಜನರಿಗೆ ತಲುಪುತ್ತಿತ್ತು ಆದರೆ ಈ ದಿನ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಹಾಗೂ ಸರ್ಕಾರಿ ಶಾಲೆಯವರು ಶಾಲೆಯಲ್ಲಿ ಆಟಿಡೊಂಜಿ ದಿನ ಆಚರಿಸಿ ಸರ್ವ ಧರ್ಮ ದ ಸದಸ್ಯರು ಇದರಲ್ಲಿ ಪಾಲುಗೊಂಡು ವಿಶೇಷವಾಗಿ ತುಳುನಾಡಿನ ಸಂಸ್ಕೃತಿಯನ್ನು ಉತ್ತರ ಕನ್ನಡದ ಜನರಿಗೂ ಪರಿಚಯಿಸಿದ್ದಕ್ಕಾಗಿ ಧನ್ಯವಾದ ಸಮರ್ಪಿಸಿದರು.

ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ನ ಅಧ್ಯಕ್ಷರಾದ ಅನಿಲ್ ಕುಮಾರ್ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉದಯ್ ಅಮೀನ್ ಮಟ್ಟು ತುಳುನಾಡಿನ ಆಷಾಢ ಮಾಸದಲ್ಲಿ ತಿನ್ನುವ ವಿವಿಧ ಔಷಧೀಯ ಗುಣವುಳ್ಳ ತಿಂಡಿಗಳ ಮಾಹಿತಿ ಹಾಗೂ ಹಿಂದಿನ ಕಾಲದ ಆಶಾಡ ಮಾಸದಲ್ಲಿ ಜನರು ಪಡುವ ಕಷ್ಟ ಹಾಗೂ ಆಚಾರ ವಿಚಾರಗಳ ಬಗ್ಗೆ ಯುವ ಪೀಳಿಗೆಗೆ ಮಾಹಿತಿ ನೀಡಿದರುಕ. ಮುಖ್ಯ ಅತಿಥಿಗಳಾದ ಲಯನ್ ವೆಂಕಟೇಶ ಹೆಬ್ಬಾರ್ ಮಾತನಾಡಿ, ಪ್ರಸ್ತುತ ಯುವ ಪೀಳಿಗೆ ಪಿಜ್ಜಾ ನೂಡಲ್ಸ್ ನಂತಹ ಜಂಕ್ ಫುಡ್ ಗೆ ಒಗ್ಗಿ ಹೋಗಿ ಹಿಂದಿನ ಕಾಲದ ಆಷಾಢ ಮಾಸದ ಪೌಷ್ಟಿಕ ಆಹಾರ ಪದ್ಧತಿಗಳನ್ನು ಮರೆತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಅದಕ್ಕಾಗಿ ಇಂತಹ ಕಾರ್ಯಕ್ರಮಗಳು ಜರಗಿ ಯುವ ಪೀಳಿಗೆಗೆ ಮಾರ್ಗದರ್ಶನ ನೀಡಬೇಕು ಎಂದರು.

ಈ ಸಂದರ್ಭ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನ ಪ್ರತಿಭಾ ಹೆಬ್ಬಾರ್, ಭಾಸ್ಕರ್ ಕಾಂಚನ್, ಕಲ್ಲಪ್ಪ ತಡವಲಗ, ಕಾಮೇಶ್ವರಿ,ಸ್ಥಳೀಯ ಮಾಜಿ ಕೌನ್ಸಿಲರ್ ಬಶೀರ್ ಕುಲಾಯಿ, ಶಾಲಾ ಅಭಿವೃದ್ಧಿಯ ಅಧ್ಯಕ್ಷರಾದ ಜ್ಯೋತಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಕಾಮೇಶ್ವರಿ ಭಟ್, ಶಿಕ್ಷಕಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಸುಜಾತ ಭಟ್ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here