SKDRDP ವಿಟ್ಲ ವಲಯ; ವಿಟ್ಲ ಪಡ್ನೂರು ಒಕ್ಕೂಟದ ವಾರ್ಷಿಕೋತ್ಸವ

0
25

ವಿಟ್ಲ ವಲಯದ ವಿಟ್ಲ ಪಡ್ನೂರು ಒಕ್ಕೂಟದ ವಾರ್ಷಿಕೋತ್ಸವ ಕಾರ್ಯಕ್ರಮ ಒಕ್ಕೂಟದ ಅಧ್ಯಕ್ಷರಾದ ಪ್ರೇಮಲತಾ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಿನಿಲ ಗೋಪಾಲ ಕೃಷ್ಣ ಭಟ್ ಮಾಡಿ ಯೋಜನೆಯ ಕಾರ್ಯಕ್ರಮದ ಬಗ್ಗೆ ಉತ್ತಮ ಅಭಿಪ್ರಾಯವನ್ನು ತಿಳಿಸಿದರು. ಮುಖ್ಯ ಅತಿಥಿಯಾಗಿ ರಕ್ಷಣ ಕನ್ನಡ 2 ರ ನಿರ್ದೇಶಕರಾದ ಬಾಬು ನಾಯ್ಕ ರವರು ಒಕ್ಕೂಟದ ಜವಾಬ್ದಾರಿ ಸಂಘ ನಿರ್ವಹಣೆ ಬ್ಯಾಂಕ್ ವಿಧಿಸುವ ಬಡ್ಡಿ, ಮುಂತಾದ ವಿಚಾರಗಳ ಬಗ್ಗೆ ಮಾರ್ಗದರ್ಶನ ನೀಡಿದರು. ವೇದಿಕೆಯಲ್ಲಿ ನೈಟಿಲೇ ಕಿಶನ್, ಯೋಜನಾಧಿಕಾರಿಗಳಾದ ಸುರೇಶ್ ಗೌಡ, ವಿಟ್ಲ ವಲಯದ ವಲಯ ಅಧ್ಯಕ್ಷರಾದ ಪ್ರಮೀಳಾ, ನಿಕಟ ಪೂರ್ವ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಉತ್ತಮ ಸಂಘ, ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ನಿಕಟ ಪೂರ್ವ ಅಧ್ಯಕ್ಷರುಗಳನ್ನು ಗುರುತಿಸಲಾಯಿತು. ವಿಭಾಗದ ಸಾಧನ ವರದಿಯನ್ನು ಕಾಯದರ್ಶಿ ಹೇಮಲತಾ ಮಂಡಿಸಿದರು. ವಲಯ ಮೇಲ್ವಿಚಾರಕ ಜಗದೀಶ್ ಸ್ವಾಗತಿಸಿ,, ಸೇವಾ ಪ್ರತಿನಿಧಿ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here