ಉಡುಪಿ: ಮುದ್ದಿನ ಕೃಷ್ಣನಿಗೆ ಮುತ್ತಿನ ಕವಚ

0
8

ಪರ್ಯಾಯ ಶ್ರೀ ಪುತ್ತಿಗೆ ಮಠದ ಕಿರಿಯ ಶ್ರೀಗಳಾದ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ಜನ್ಮ ನಕ್ಷತ್ರದ ಪ್ರಯುಕ್ತ ಶ್ರೀಕೃಷ್ಣ ಮಠದಲ್ಲಿ ಇಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ .

ಉತ್ಸವ ಪ್ರಿಯನಾದ ಶ್ರೀ ಕೃಷ್ಣ ದೇವರಿಗೆ ಪರ್ಯಾಯದ ಮೊದಲ ದಿನದಿಂದಲೂ ಭಕ್ತವೃಂದವು ಕಾತರದಿಂದ ನಿರೀಕ್ಷಿಸುವಂತೆ ಮಾಡಿ, ಅಲಂಕಾರಪ್ರಿಯನನ್ನು ದಿನಕ್ಕೊಂದು ವಿಶೇಷವಾಗಿ ಅಲಂಕಾರದಿಂದ ಪೂಜಿಸುತ್ತಿರುವ ಅಲಂಕಾರ ತಜ್ಞ ಎಂದು ಎಲ್ಲರಿಂದಲೂ ಕೀರ್ತಿ ಪಡೆದಿರುವ ಕಿರಿಯ ಶ್ರೀಗಳು ಅದಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ದಿವ್ಯ ಹಸ್ತಗಳಿಂದ, ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಇಂದು ವಿಶೇಷವಾಗಿ ಶ್ರೀ ಕೃಷ್ಣ ದೇವರಿಗೆ ಮುತ್ತಿನ ಕವಚವನ್ನು ಸಮರ್ಪಿಸಲಿದ್ದಾರೆ. ಸಾಯಂ ಸಾಲಂಕೃತ ಪಲ್ಲಕ್ಕಿಯಲ್ಲಿ ಮುತ್ತಿನ ಕವಚವನ್ನು ಮೆರವಣಿಗೆಯಲ್ಲಿ ವೈಭವದಿಂದ ಪೂಜ್ಯ ಶ್ರೀಪಾದದ್ವಯರ ಉಪಸ್ಥಿತಿಯಲ್ಲಿ ಶ್ರೀ ಕೃಷ್ಣ ಮಠಕ್ಕೆ ತರಲಾಯಿತು.

LEAVE A REPLY

Please enter your comment!
Please enter your name here