ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನ ಹಸ್ತಾಂತರ

0
27

ಬಂಟ್ವಾಳ : ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ವೀರಮಾರುತಿನಗರ ನಿವಾಸಿ ಶ್ರೀಮತಿ ಆಶಾ ರವರ ಮನೆಗೆ ಗಾಳಿ ಮಳೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದ್ದು, ಪರಿಹಾರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜುರಾದ ಸಹಾಯಧನವನ್ನು ಮನೆ ಭೇಟಿ ಮಾಡಿ ವಿತರಿಸಲಾಯಿತು.
ಈ ಸಂದರ್ಭ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ, ಒಕ್ಕೂಟದ ಅಧ್ಯಕ್ಷರಾದ ಜಯಂತ್, ವೀರಮಾರುತಿ ಭಜನಾ ಮಂದಿರದ ಮಾಜಿ ಅಧ್ಯಕ್ಷರಾದ ಚಂದ್ರಹಾಸ, ತುಂಬೆ ವಲಯ ಮೇಲ್ವಿಚಾರಕಿ ಮಮತಾ , ಸೇವಾ ಪ್ರತಿನಿಧಿ ಕುಸುಮಾವತಿ, ಸ್ವ ಸಹಾಯ ಸಂಘದ ಸದಸ್ಯರಾದ ಕುಸಪ್ಪ ,ಮಂಜುನಾಥ, ಶಶಿಕಲಾ, ವಿದ್ಯಾ, ಶೋಭಾ  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here