ʻಮಾಧುರಿʼಗಾಗಿ ಮಿಡಿದ ಲಕ್ಷಾಂತರ ಜನ..! ಅಂಬಾನಿಯ ಜಿಯೋಗೆ ಗುಡ್​​ ಬೈ

0
50

ಮಹಾರಾಷ್ಟ್ರ : ಎಲ್ಲಿ ನೋಡಿದ್ದರಲ್ಲಿ ಮಾಧುರಿ ಆನೆಯದ್ದೇ ಸುದ್ದಿ. ಹೌದು, ಕೊಲ್ಹಾಪುರದ ನಂದನಿ ಮಠ ದಿಂದ ಮಹಾದೇವಿ ಎನ್ನುವ ಹೆಸರಿನ ಆನೆಯನ್ನು ಅನಂತ್ ಅಂಬಾನಿ ನಿರ್ವಹಿಸುತ್ತಿರುವ ಗುಜರಾತಿನ ವಂತಾರ ಅನಿಮಲ್ ರೆಸ್ಕ್ಯೂ ಸೆಂಟರ್ ಗೆ ಸ್ಥಳಾಂತರಿಸಲಾಗಿದೆ. ಇದು ಜೈನ ಸಮುದಾಯದ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೋರ್ಟ್‌ನ ಈ ಆದೇಶವು ಜೈನ ಸಮುದಾಯದ ಜನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಜೈನ ಸಮುದಾಯದ ಜನರು ಪ್ರತಿಭಟನೆಗೆ ಮುಂದಾಗಿದ್ದಾರೆ. ಆನೆಯನ್ನು ಮತ್ತೆ ಜೈನಮಠಕ್ಕೆ ಹಿಂದುರಿಗಿಸಬೇಕೆಂದು ಒತ್ತಾಯವು ಕೇಳಿ ಬರುತ್ತಿವೆ.

ಕರ್ನಾಟಕದಲ್ಲಿ ಹುಟ್ಟಿದ್ದ ಮಹಾದೇವಿ (ಮಾಧುರಿ) ಆನೆಯನ್ನು ಮೂರು ವರ್ಷವಿರುವಾಗಲೇ ಕೊಲ್ಹಾಪುರದ ಜೈನ ಮಠಕ್ಕೆ ಹಸ್ತಾಂತರಿಸಲಾಗಿತ್ತು. ಹೀಗಾಗಿ ಕಳೆದ ಮೂವತ್ತು ವರ್ಷಗಳಿಂದ ಮಠದಲ್ಲೇ ಇದ್ದ ಆನೆಯೂ ಜಾತ್ರೆಗಳು, ಧಾರ್ಮಿಕ ಉತ್ಸವಗಳ ಭಾಗವಾಗಿಯೇ ಇತ್ತು. ಹೀಗಾಗಿ ಜೈನ ಧರ್ಮಗುರು ಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗೂ ಹಾಗೂ ಇಲ್ಲಿನ ಭಕ್ತವೃಂದಕ್ಕೂ ಮಹಾದೇವಿ ಎನ್ನುವ ಆನೆಯೂ ತುಂಬಾನೇ ಆಪ್ತವಾಗಿತ್ತು, ಹೀಗಾಗಿ ಭಾವನಾತ್ಮಕ ಸಂಬಂಧವು ಏರ್ಪಟ್ಟಿತ್ತು. ಹೀಗಾಗಿರುವ ಆನೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು, ಇತ್ತ ಮಾನಸಿಕ ಸ್ಥಿಮಿತ ಕಳೆದು ಕೊಳ್ಳುತ್ತಿದೆ ಎಂದು ಎನ್​​ಜಿಓ ವೊಂದು ಹೈಪವರ್ ಕಮಿಟಿ ಗೆ ದೂರನ್ನು ನೀಡಿದ ಹಿನ್ನಲೆಯಲ್ಲಿ ಜುಲೈ 16, 2025ರಂದು ಬಾಂಬೆ ಹೈಕೋರ್ಟ್ ಈ ಮಹಾದೇವಿ ಆನೆಯನ್ನು ಗುಜರಾತ್‌ನ ವಂತಾರ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಬೇಕು ಎಂದು ತೀರ್ಪು ನೀಡಿದ್ದ ಬೆನ್ನಲ್ಲೇ ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಆದರೆ ಸುಪ್ರೀಂ ಕೋರ್ಟ್ ಹೈಕೋರ್ಟ್‌ನ ತೀರ್ಪನ್ನು ಬೆಂಬಲಿಸುವ ಮುಖೇನ ಸ್ಥಳಾಂತರಕ್ಕೆ ಸೂಚಿಸಿದೆ.

ಕೊಲ್ಹಾಪುರದ ಜನರು ಜಿಯೋಗೆ ಗುಡ್​​ಬೈ ಹೇಳಲು ನಿರ್ಧಾರ

ಅಂಬಾನಿ ಒಡೆತನಕ್ಕೆ ಸೇರಿದ ವಂತಾರಕ್ಕೆ ಜೈನಮಠದ ಮಹಾದೇವಿ ಅನ್ನೋ ಹೆಸರಿನ ಆನೆಯೂ ಸ್ಥಳಾಂತರಗೊಂಡಿರುವುದು ಶಿರೋಲ್​ನ ಜನರ ಹಾಗೂ ಜೈನ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಈ ಹಿನ್ನಲೆಯಲ್ಲಿ ಜೈನ ಸಮುದಾಯಗಳು ಸೇರಿದಂತೆ ಇಲ್ಲಿನ ಜನರು ಅಂಬಾನಿಯವರ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಮೂಲಕ ಜಿಯೋಗೆ ಗುಡ್ ಬಾಯ್ ಹೇಳಲು ನಿರ್ಧರಿಸಿದ್ದಾರೆ. ಈ ಸಂಸ್ಥೆಯ ಉತ್ಪನ್ನಗಳು ಹಾಗೂ ಸೇವೆಗಳನ್ನು ಬಳಸದಿರುವ ನಿರ್ಧಾರಕ್ಕೆ ಬಂದಿದ್ದಾರೆ. ಇನ್ನು ಜಿಯೋಗೆ ಪೋರ್ಟ್​ ಆಗುತ್ತಿದ್ದು, ಆನೆಯ ಜೊತೆಗೆ ಭಾವನಾತ್ಮಕ ಸಂಬಂಧ ಎಷ್ಟಿತ್ತು ಎನ್ನುವುದಕ್ಕೆ ಇದುವೇ ಸಾಕ್ಷಿಯಾಗಿದೆ.

ಭಕ್ತವೃಂದಕ್ಕೆ ಮಹಾದೇವಿಯಲ್ಲ, ಮಾಧುರಿಯೆಂದೇ ಪರಿಚಿತ

ಶಿರೋಲ್ ತಾಲೂಕಿನ ಜನರಿಗೂ ಈ ಆನೆಗೂ ಎಲ್ಲಿಲ್ಲದ ಆತ್ಮೀಯತೆ. ಕಳೆದ ಮೂವತ್ತು ವರ್ಷಗಳಿಂದ ಮಠದಲ್ಲೇ ಇದ್ದ ಆನೆಯೂ ಜಾತ್ರೆಗಳು, ಧಾರ್ಮಿಕ ಉತ್ಸವಗಳ ಭಾಗವಾಗಿದ್ದ ಕಾರಣ ಈ ಆನೆಯೊಂದಿಗೆ ಆತ್ಮೀಯತೆ ಬೆಳೆದಿತ್ತು. ಈ ಆನೆಯ ಹೆಸರು ಮಹಾದೇವಿಯಾಗಿದ್ದರೂ ಈ ತಾಲೂಕಿನ ಜನರು ಪ್ರೀತಿಯಿಂದಲೇ ಮಾಧುರಿ ಈ ಹೆಸರಿನಿಂದ ಕರೆಯುತ್ತಿದ್ದರು.

LEAVE A REPLY

Please enter your comment!
Please enter your name here