ವಿಶ್ವ ಕೊಂಕಣಿ ಕೇಂದ್ರ: ಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ  ಕಾರ್ಯಾಗಾರ ಸಮಾರೋಪ

0
8

ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಸಹಯೋಗದೊಂದಿಗೆ  ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ (ರಿ),  ಇವರ ಸಂಯುಕ್ತ ಆಶ್ರಯದಲ್ಲಿ ಕುಡಾಳ್ ದೇಶ್ಕರ್  ಸಮುದಾಯದ ಇಂಜಿನಿಯರಿಂಗ್, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಸತಿ ಸಹಿತ ನಾಲ್ಕು ದಿನಗಳ ಚಟುವಟಿಕೆ ಆಧಾರಿತ ‘ಪರಿಣತಿ-2025′ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರದ ಸಮಾರೋಪ ಸಮಾರಂಭ ಜರುಗಿತು.

ಶಿಬಿರದ  ನಾಲ್ಕನೇ ದಿನದಲ್ಲಿ ಬೆಳಗ್ಗೆ ಶಿಬಿರಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿತು. ಹಾಗೂ “ಸ್ಪಾರ್ಕ್ ಟು ಸ್ಟಾರ್ಟ ಅಪ್’  ಸೆಮಿನಾರ್‍  ನ ಸಂಪನ್ಮೂಲ ವ್ಯಕ್ತಿಯಾಗಿ ‘ದೇವಗಿರಿ ಟೀ ಎಂಡ್ ಪ್ರೊಡ್ಯೂಸ್’ ನ ಮಾರ್ಗದರ್ಶಿ, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿಎ ನಂದ ಗೋಪಾಲ ಶೆಣೈ, ಇವರು  ತಮ್ಮ ಉದ್ಯಮೀ ಜೀವನದ ಯಶಸ್ಸನ್ನು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮತ್ತು ಇಂದಿನ ಕೆಲಸ ಇಂದೇ ಮಾಡಿ ಮುಗಿಸುವ ಛಲ, ಸೋಲೇ ಗೆಲುವಿನ ಮೂಲ, ಸೋಲನ್ನು ಸ್ವೀಕರಿಸಿ ಮುಂದೆ ಅವಿರತ ಪರಿಶ್ರಮದ ಮೂಲಕ ಜಯ ಸಾಧಿಸಬೇಕು ಮುಂತಾದ ಕೆಲವು ಉದಾಹರಣೆಗಳನ್ನು ಶಿಬಿರಾರ್ಥಿಗಳಿಗೆ ‘ಪವರ್ ಪೊಯಿಂಟ್ ಪ್ರೆಸೆಂಟೇಶನ್’ ಮೂಲಕ ನೀಡಿ ಸ್ಫೂರ್ತಿದಾಯಕ ಮಾತುಗಳಿಂದ ಮನವರಿಕೆ ಮಾಡಿಕೊಟ್ಟರು.

ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ಶ್ರೀ ಡಿ ರಮೇಶ ನಾಯಕ್ ಮೈರಾ,  ಅವರು, ಸ್ಥಾಪಕ ಅಧ್ಯಕ್ಷರಾದ ದಿವಂಗತ ಬಸ್ತಿವಾಮನ ಶೆಣೈಯವರನ್ನು ನೆನೆದು,  ವಿಶ್ವ ಕೊಂಕಣಿ ಕೇಂದ್ರದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಭಾಷಿಕ  ಹಾಗೂ ಶೈಕ್ಷಣಿಕ ಕಾರ್ಯಕ್ರಮ ನಡೆಯುತಲಿದ್ದು, ಇಂತಹ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ವಿದ್ಯಾರ್ಥಿಗಳಿಗೆ ಅಗತ್ಯವಾಗಿದ್ದು ಕಾರ್ಯಾಗಾರವನ್ನು ನಡೆಸಲು ಅನುವು ಮಾಡಿಕೊಟ್ಟ ವಿಶ್ವ ಕೊಂಕಣಿ ಕೇಂದ್ರಕ್ಕೆ ಅಭಾರಿಯಾಗಿದ್ದೇನೆ ಎಂದು ಹೇಳಿ ಅಧ್ಯಕ್ಷ ಸಿ ಎ. ನಂದಗೋಪಾಲ ಶೆಣೈ ಇವರನ್ನು ಅಭಿನಂದಿಸಿದರು.  ಶಿಬಿರಾರ್ಥಿಗಳು ಮೌಲ್ಯಯುತ ಸಂಸ್ಕಾರ ಕಲಿತು ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ  ಸೇವೆ ಸಲ್ಲಿಸಬೇಕು, ಎಂದು ಹೇಳಿ ನೆರೆದ ಅತಿಥಿ ಗಣ್ಯರನ್ನು ಸ್ವಾಗತಿಸಿದರು.       

ಅತಿಥಿಯರಾದ ಅರವಿಂದ ಪ್ರಭು, ಕುಲಶೇಖರ, ಇವರು ಮಾತನಾಡುತ್ತಾ ವಿದ್ಯಾರ್ಥಿಗಳು ಒಳ್ಳೆಯ ನೀತಿ ಪಾಠ ಕಲಿತು, ಕಾಲ ಕಾಲಕ್ಕೆ ಜ್ಞಾನ ಹಾಗೂ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು,  ಎಲ್ಲರೂ ಒಳ್ಳೆಯ ಗುರಿಯನ್ನು ಮನಸ್ಸಿನಲ್ಲಿಟ್ಟು ಜಯಶೀಲರಾಗಬೇಕು ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು.

ವಿಶ್ವ ಕೊಂಕಣಿ ಕೇಂದ್ರದ  ಕೋಶಾಧಿಕಾರಿ ಬಿ ಆರ್ ಭಟ್ ಅವರು “ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನವು ವಿಶ್ವ ಕೊಂಕಣಿ ಕೇಂದ್ರದ ಸಹಯೋಗದೊಂದಿಗೆ ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ಸದುಪಯೋಗ ಪಡೆದ ವಿದ್ಯಾರ್ಥಿಗಳು ಮುಂದೆ ಹಳೆ ವಿದ್ಯಾರ್ಥಿ ಸಂಘವನ್ನು ಕಟ್ಟಿ ಭದ್ರ ಬುನಾದಿಯನ್ನು ಹಾಕಬೇಕು ಮತ್ತು ಸಮುದಾಯವನ್ನು ಬೆಳೆಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗೂ ಕೌಶಲ್ಯಾಭಿವೃದ್ಧಿ ಚಟುವಟಿಕೆ ಅತೀ ಅಗತ್ಯವಾಗಿದೆ ಎಂದು ಹಾರೈಸಿದರು.

ವಿಶ್ವ ಕೊಂಕಣಿ ಕೇಂದ್ರ ಕಾರ್ಯದರ್ಶಿ ಡಾ. ಕಸ್ತೂರಿ ಮೋಹನ ಪೈ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ,  “ನಮ್ಮ ಮಾತೃಭಾಷಾ ಅಸ್ಮಿತೆಯನ್ನು ಮರೆಯದೇ ಕಾಪಾಡಬೇಕು. ಮಾತೃ ಭಾಷೆಯನ್ನು ಪುಸ್ತಕದ ಮೂಲಕ, ಸಂಗೀತದ ಮೂಲಕ ಅಗತ್ಯವಾಗಿ  ಬಳಸಿಕೊಂಡು ಜೀವನ ಕೌಶಲ್ಯಗಳನ್ನು ಅಳವಡಿಸಿ, ಆರ್ಥಿಕವಾಗಿ ಸಬಲರಾಗಿ ಜೀವನದಲ್ಲಿ ಜಯ ಸಾಧಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಬಿರಾರ್ಥಿಗಳು ಕಾರ್ಯಾಗಾರದ ವಿವಿಧ ಚಟುವಟಿಗಳನ್ನು  ಮತ್ತು  ತಮ್ಮ ಅನುಭವವನ್ನು ಹಂಚಿಕೊಂಡರು. ಶ್ರೀಮತಿ ಸುಚಿತ್ರಾ ರಮೇಶ ನಾಯಕ್, ಇವರು ಸಾಂಸ್ಕೃತಿಕ ಚಟುವಟಿಕೆಗಳನ್ನು ವಿಶ್ಲೇಷಿಸಿ ಮಾತನಾಡಿದರು. 

ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ, ವಿಜೇತರಾದ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು. ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು.  ಡಾ.ವಿಜಯಲಕ್ಷ್ಮಿ ನಾಯಕ್ ಅವರು  ನಾಲ್ಕು ದಿನಗಳ ಈ ಕಾರ್ಯಗಾರದ ಉಸ್ತುವಾರಿಯನ್ನು ವಹಿಸಿದ್ದು, ಜೊತೆಯಲ್ಲಿ ವಿ.ಕೊ ಕೇಂದ್ರದ ಲಕ್ಷ್ಮೀ ಕಿಣಿ, ವಿಘ್ನೇಶ್ ಸಹಕರಿಸಿದ್ದರು.

ವಿಶ್ವ ಕೊಂಕಣಿ ಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಬಿ ದೇವದಾಸ್ ಪೈ, ಪೂರ್ಣಾನಂದ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳಿಧರ ಪ್ರಭು ವಗ್ಗ, ದಯಾನಂದ ನಾಯಕ್ ಪೂಂಜಾಲ್ ಕಟ್ಟೆ, ನಿಕಟ ಪೂರ್ವ ಅಧ್ಯಕ್ಷರಾದ ವಿಜಯ ಶೆಣೈ ಕೊಡಂಗೆ, ಕಾರ್ಯದರ್ಶಿ ರವೀಂದ್ರ ನಾಯಕ್ ಕುಂಟಲ್ಪಾಡಿ, ಅನಂತ್ ಪ್ರಭು ಮರೋಳಿ, ಕನಾ೯ಟಕ ರಾಜ್ಯೋತ್ಸವ ಪ್ರಶಸ್ತಿವಿಜೇತ ನಾರಾಯಣ ನಾಯಕ್ ಕಿನ್ನಾಜೆ, ಮೋಹನ್ ನಾಯಕ್ ಒಡ್ಡೂರು, ಉಪೇಂದ್ರ ನಾಯಕ್ ಮೇರಿಹಿಲ್,  ಸುಧಾಕರ ನಾಯಕ್ ಅಸೈಗೋಳಿ, ದಯಾನಂದ ನಾಯಕ್ ಮೈರ, ಗಣೇಶ್ ನಾಯಕ್ ಬೋಳಂಗಡಿ, ರಾಜೇಶ್ ನಾಯಕ್ ಬೋಳಂಗಡಿ, ಭಾಸ್ಕರ ಪ್ರಭು ಗೋಳಿಮಾರು, ರತ್ನಾವತಿ ಪ್ರಭು ಕುಲಶೇಖರ, ಗಣಪತಿ ಶೆಣೈ ಡೆಚ್ಚಾರು,  ಪ್ರಭಾಕರ ಪ್ರಭು ಗೋಳಿಮಾರು, ಸುನಂದಾ ನಾಯಕ್, ದಿನಕರ ಶೆಣೈ ಮರೋಳಿ, ಗೋಪಾಲ ಸಾಮಂತ್ ಮೈರಾ, ನಿತ್ಯಾನಂದ ಭಟ್, ಭಾಸ್ಕರ ಪ್ರಭು ಕೋರ್ದೊಟ್ಟು, ವಿಶ್ವನಾಥ ಶೆಣೈ ಮರೋಳಿ, ಮುಂತಾದವರು ಉಪಸ್ಥಿತರಿದ್ದರು. 

ಪ್ರತಿಷ್ಠಾನದ ಹಿರಿಯ ವಿದ್ಯಾರ್ಥಿಗಳಾದ ಪ್ರಶಾಂತ್ ನಾಯಕ್ ಸಿದ್ದಕಟ್ಟೆ, ಮಧುಸೂಧನ್ ಪ್ರಭು ಬಜಪ್ಪಾಲ್, ಸ್ವಾತಿ ನಾಯಕ್ ಒಡ್ಡೂರು,ಮೇಘಾ ಶೆಣೈ ಡೆಚ್ಚಾರು,  ಪೂಜಾ ಪ್ರಭು ಮಣಿಯ, ಮುಂತಾದವರು ಶಿಬಿರದ ಚಟುವಟಿಕೆಗಳಲ್ಲಿ ಕಾರ್ಯನಿವ೯ಹಿಸಿದರು.  ಶಿಭಿರಾಥಿ೯ಗಳಾದ ರಚನಾ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು, ಚೇತನ ಶೆಣೈ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here