ವೈಫಲ್ಯ ನನ್ನ ಗುರು, ಯಶಸ್ಸು ನನ್ನ ಫಲ – ನಂದಗೋಪಾಲ ಶೆಣೈ

0
4

“ಯಾವುದೇ ಯಶಸ್ಸು ಏಕಾಏಕಿ ಬರುವುದಿಲ್ಲ. ಅದು ಕಠಿಣ ಪರಿಶ್ರಮ, ತಾಳ್ಮೆ, ಹಾಗೂ ನಿರಂತರ ಪ್ರಯತ್ನದ ಫಲ. ವೈಫಲ್ಯ ನನ್ನ ಗುರು, ಯಶಸ್ಸು ನನ್ನ ಫಲ. ಯಾವುದೇ ಕ್ಷೇತ್ರದ ಉದ್ಯಮಗಳನ್ನು ಆರಂಭಿಸುವ ಸಂದರ್ಭದಲ್ಲಿ ನಮ್ಮ ಆಲೋಚನೆಗಳು, ಪ್ರಯತ್ನಗಳು, ಚಿಂತನೆಗಳು ಸಾಧಿಸಬೇಕಾದ ಗುರಿಯತ್ತ ಕೇಂದ್ರೀಕೃತವಾಗಿರಬೇಕು. ಉದ್ಯಮದಲ್ಲಿ ಎತ್ತರಕ್ಕೆ ಬೆಳೆದ ಹಾಗೆ ಅಡಿಪಾಯದ ತಾಯಿ ಬೇರು ಆಳಕ್ಕೆ ಸಾಗುವಂತೆ ಬುಡವನ್ನು ಗಟ್ಟಿಗೊಳಿಸುವ ಸಾಮರ್ಥ್ಯವನ್ನು ನಾವು ಹೊಂದಿರಬೇಕು, ಎಂದು ಎಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿಎ ನಂದಗೋಪಾಲ ಶೆಣೈ ಹೇಳಿದರು.

ಇವರು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಹಾಗೂ ದ.ಕ ಜಿಲ್ಲಾ ಕುಡಾಳ್  ದೇಶದ ಅಧ್ಯಕ್ಷ ಬ್ರಾಹ್ಮಣ ಸಂಘ ಇವರ ಜಂಟಿ ಆಶ್ರಯದಲ್ಲಿ, ವಿಶ್ವ ಕೊಂಕಣಿ ಕೇಂದ್ರದಲ್ಲಿ ಹಮ್ಮಿಕೊಂಡ ನಾಲ್ಕು ದಿನದ ವ್ಯಕ್ತಿತ್ವ ವಿಕಸನ ಹಾಗೂ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ “ಪರಿಣತಿ – 2025” ಸನಿವಾಸ ಕಾರ್ಯಾಗಾರದ ನಾಲ್ಕನೇ ದಿನದಲ್ಲಿ ಹಮ್ಮಿಕೊಂಡ “ಸ್ಪಾಕ್೯  ಟು ಸ್ಟಾಟ೯ಅಪ್” ಶೀರ್ಷಿಕೆ ಅಡಿಯಲ್ಲಿ ಮುಂದಿನ ಪೀಳಿಗೆಗೆ ಉದ್ಯಮಶೀಲತೆಯ ವಿಚಾರದಲ್ಲಿ  ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಗಾರವನ್ನು ನಡೆಸಿಕೊಟ್ಟರು. ಶಿಬಿರಾಥಿ೯ಗಳು ತಮ್ಮ ಸಂದೇಹಗಳನ್ನು ಮುಕ್ತ ಸಂವಾದದೊಂದಿಗೆ ಪರಿಹರಿಸಿಕೊಂಡರು.

ಈ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ಡಿ. ರಮೇಶ್ ನಾಯಕ್ ಮೈರಾ, ಕೋಶಾಧಿಕಾರಿ ಬಿ. ಆರ್. ಭಟ್, ಡಾ. ಬಿ ದೇವದಾಸ್ ಪೈ, ಶ್ರೀ ಪುಣಾ೯ನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳಿಧರ ಪ್ರಭು ವಗ್ಗ, ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ದಯಾನಂದ ನಾಯಕ್ ಪುಂಜಾಲ್ಕಟ್ಟೆ,  ಶ್ರೀಮತಿ ಸುಚಿತ್ರಾ ರಮೇಶ್ ನಾಯಕ್, ಸುರೇಂದ್ರ ಸಾಮಂತ್, ಅನಂತ ಪ್ರಭು ಮರೋಳಿ, ವಿಶ್ವನಾಥ ಶೆಣೈ ಮರೋಳಿ, ರಾಜೇಶ್ ಪ್ರಭು ಬನ್ನೂರು, ಗಣೇಶ್ ನಾಯಕ್ ಬೋಳಂಗಡಿ, ರಾಜೇಶ್ ನಾಯಕ್ ಬೋಳಂಗಡಿ,  ಪ್ರಭಾಕರ ಪ್ರಭು ಗೋಳಿಮಾರ್, ಭಾಸ್ಕರ್ ಪ್ರಭು ಕೊರ್ದೊಟ್ಟು, ಭಾಸ್ಕರ್ ಪ್ರಭು ಗೋಳಿಮಾರು, ರತ್ನಾವತಿ ಪ್ರಭು ಕುಲಶೇಖರ್, ಸುಧಾ ಪ್ರಭು ಕುಲಶೇಖರ್, ಸುಧಾಕರ್ ನಾಯಕ್ ಅಸೈಗೋಳಿ, ಮೋಹನ್ ನಾಯಕ್ ಒಡ್ಡೂರು, ಸೀತಾರಾಮ ಪ್ರಭು ಕೊಟ್ಟಾರ, ಅರವಿಂದ ಪ್ರಭು ಕುಲಶೇಖರ್, ಅಶೋಕ್ ನಾಯಕ್ ಬಿಕನ೯ಕಟ್ಟೆ, ಪ್ರಭಾಕರ ಪ್ರಭು ಮೇರೀಹಿಲ್, ಗೋಪಾಲ್ ಸಾಮಂತ್ ಮೈರಾ, ವಿಜಯ ಶೆಣೈ ಕೊಡಂಗೆ, ಮುಂತಾದವರು ಉಪಸ್ಥಿತರಿದ್ದರು. ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ಡಿ ರಮೇಶ್ ನಾಯಕ್ ಮೈರಾ ಸ್ವಾಗತಿಸಿ, ಡಾ. ವಿಜಯಲಕ್ಷ್ಮಿ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು, ಶಿಬಿರಾರ್ಥಿ ಪ್ರತಿಕ್ಷಾ ವಂದಿಸಿದರು.

LEAVE A REPLY

Please enter your comment!
Please enter your name here