ಬಂಟ್ವಾಳ ತಾಲ್ಲೂಕಿನ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಸಿದ್ಧಕಟ್ಟೆ ಸಮೀಪದ ಮಂಚಕಲ್ಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಹಣ್ಣಿನ ಗಿಡಗಳನ್ನು ಬುಧವಾರ ನೆಡಲಾಯಿತು. ಕ್ಲಬ್ಬಿನ ಅಧ್ಯಕ್ಷ ವಿಜಯ ಫೆರ್ನಾಂಡಿಸ್, ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ, ಸದಸ್ಯರಾದ ಸೆಬೆಸ್ಟಿನ್ ಮಿನೇಜಸ್, ರಾಜೇಶ ಶೆಟ್ಟಿ ಕೊನೆರೊಟ್ಟು, ಶಶಿಧರ ಶೆಟ್ಟಿ ಕಲ್ಲಾಪು, ಮುಖ್ಯಶಿಕ್ಷಕಿ ವಿನಿತಾ ಮತ್ತಿತರರು ಇದ್ದರು.