ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, ನಗರ ಪಂಚಾಯತ್ ಮೂಲ್ಕಿ, ಅಧನಿ ಫೌಂಡೇಶನ್ ಮಂಗಳೂರು, ಪ್ರಾಥಮಿಕ ಅರೋಗ್ಯ ಕೇಂದ್ರ ಕೆಮ್ರಾಲ್ ಇವರ ಸಂಯುಕ್ತ ಆಶ್ರಯದಲ್ಲಿ ಸ್ಥನ್ಯಪಾನ ಸಪ್ತಾಹ ಕಾರ್ಯಕ್ರಮ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಅಂಬೇಡ್ಕರ್ ಭವನ ಅಮೃತಾಮಯಿನಗರ ಕಾರ್ನಾಡ್ ಮೂಲ್ಕಿ ಇಲ್ಲಿ ನಡೆಸಲಾಯಿತು.
ಸಮಾರಂಭದ ಉದ್ಘಾಟನೆ ಯನ್ನು ನಗರ ಪಂಚಾಯತ್ ಅಧ್ಯಕ್ಷರಾದ ಶ್ರೀ ಸತೀಶ್ ಅಂಚನ್ ಇವರು ದೀಪ ಬೆಳಗಿಸಿ ಮಾತನಾಡುತ್ತಾ ಒಬ್ಬ ತಾಯಿ ತನ್ನ ಮಗುವನ್ನು ಪೌಷ್ಟಿಕ ಆಹಾರವನ್ನು ನೀಡಿ ಅರೋಗ್ಯ ಯುತವಾಗಿ ಬೆಳೆಸುವಂತೆ ಕರೆ ನೀಡುತ್ತಾ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅಧನಿ ಸಂಸ್ಥೆಯ ಶ್ರೀಮತಿ. ಪ್ರೇಮ, ಇವರು ತಾಯಿಯ ಎದೆ ಹಾಲಿನ ಮಹತ್ವ ಮತ್ತು ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿಯನ್ನು ನೀಡಿದರು. ಆರೋಗ್ಯ ನಿರೀಕ್ಷಕಿ ಶ್ರೀಮತಿ.ರಕ್ಷಿತಾ, ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಮಾರ್ಗರೆಟ್ ಎದೆಹಾಲಿನ ಮಹತ್ವ ಮತ್ತು ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ಶ್ರೀ ರಮೇಶ್ ಜೆ ಬಿ ಕಾರ್ನಾಡ್ ಸರಕಾರದ ನಾಮ ನಿರ್ದೇಸನ ಸದಸ್ಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಆರೋಗ್ಯ ಕೇಂದ್ರ ಮೂಲ್ಕಿ.
ಅರೋಗ್ಯ ಇಲಾಖೆಯ ಶ್ರೀಮತಿ. ಮಂಜುಳಾ,
ಬೀಮ್ ರಾವ್ ಯುವ ವೇದಿಕೆ ಯಾ ಉಪಾಧ್ಯಕ್ಷರು ಸಂಜೀವ. ಅಂಚನ್.ರಮೇಶ್.ಶ್ರೀಮತಿ ಸರೋಜ ಭೀಮ್ ರಾವ್ ವೇದಿಕೆಯ ಮಹಿಳಾ ಅಧ್ಯಕ್ಷೆ.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿ ಇಲಾಖೆ ಮಂಗಳೂರು ಗ್ರಾಮಾಂತರದ ಹಿರಿಯ ಮೇಲ್ವಿಚಾರಕಿ ಕು. ಭಾರತಿ ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡುತ್ತ, ಹುಟ್ಟಿದ ಮಗುವಿಗೆ ತಾಯಿಯ ಎದೆ ಹಾಲು ಅತ್ಯಗತ್ಯ. ಹೀಗಾಗಿ ಈ ಸ್ತನ್ಯಪಾನಕ್ಕೆ ಸಂಬಂದಿಸಿದಂತೆ ಜಾಗೃತಿ ಮೂಡಿಸಲು ಹಾಗೂ ತಾಯಂದಿರನ್ನು ಹಾಲುಣಿಸಲು ಪ್ರೆರೇಪಿಸಲು ವಿಶ್ವ ಸ್ತನ್ಯಪಾನ ಸಪ್ತಾಹ ವನ್ನು ಪ್ರತಿ ವರ್ಷ ಆಗಸ್ಟ್ 1 ರಿಂದ 7 ರ ವರೆಗೆ ಆಚರಿಸಲಾಗುತ್ತಿದೆ ಎಂದರು. ಸಮಾರಂಭದಲ್ಲಿ ಸ್ತ್ರೀಶಕ್ತಿ ಸದಸ್ಯರು, ನಗರ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಅಧನಿ ಸಂಸ್ಥೆಯ ಸಿಬ್ಬಂದಿಗಳು, ಮಕ್ಕಳ ತಾಯಂದಿರು, ಗರ್ಭಿಣಿಯರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಸ್ಥಳೀಯವಾಗಿ ಸಿಗುವ ಸೊಪ್ಪು, ತರಕಾರಿಗಳಿಂದ ಸುಮಾರು 45 ವಿವಿಧ ತಿಂಡಿ ತಿನಿಸುಗಳನ್ನು ಮಹಿಳೆಯರು ತಯಾರಿಸಿ ಪ್ರದರ್ಶಿಸಿ ಸವಿಯಲು ಹಂಚಿದರು. ಕಾರ್ಯಕ್ರಮವನ್ನು ಕುಸುಮ ಮತ್ತು ಸುಮತಿ ಅಂಗನವಾಡಿ ಕಾರ್ಯಕರ್ತೆಯರು ನಿರೂಪಿಸಿ, ವಂದಿಸಿದರು.