ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್( ರಿ) ವಿಟ್ಲ ಇದರ ಕಲ್ಲಡ್ಕ ವಲಯ ಮಾಮೇಶ್ವರ ಒಕ್ಕೂಟದ ಅನುಗ್ರಹ ಸಂಘದ ಸದಸ್ಯ ಮಮತಾ ರವರ ಮನೆಯ ಗೋಡೆ ಗಾಳಿ ಮಳೆಗೆ ಬಿದ್ದ ನಷ್ಟ ಸಂಭವಿಸಿದ್ದು, ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಿಹಾರ ಸಹಾಯಧನವಾಗಿ ರೂಪಾಯಿ 10,000 ಮಂಜೂರಾಗಿದ್ದು, ಮಂಜೂರಾತಿ ಪತ್ರವನ್ನು ಮನೆ ಭೇಟಿ ಮಾಡಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕಲ್ಲಡ್ಕ ವಲಯದ ಮೇಲ್ವಿಚಾರಕ ಶುಕರಾಜ್,ಒಕ್ಕೂಟದ ಅಧ್ಯಕ್ಷರು ಹರೀಶ್ ವಿ, ಸೇವಾಪ್ರತಿನಿಧಿ ಯಶೋಧ, ಪದಾಧಿಕಾರಿಗಳಾದ ರಮೇಶ್ ಗೌಡ, ಪುರಂದರ ಕೈಂತಿಲ, ಯಶೋಧ ಮಾಮೆಶ್ವರ, ಮೀನಾಕ್ಷಿ ನೆಲ್ಲಿಗುಡ್ಡೆ, ಮಮತಾ, ರವಿಶಂಕರ್ ಉಪಸ್ಥಿತರಿದ್ದರು