ಉಡುಪಿ: ಅದಿಉಡುಪಿಯಲ್ಲಿ ನೂತನವಾಗಿ ಆರಂಭಗೊಂಡ ಪ್ರಧಾನಮಂತ್ರಿ ಭಾರತೀಯ ಜನ ಔಷದಿ ಕೇಂದ್ರವನ್ನು ಬನ್ನಂಜೆ ವಾರ್ಡಿನ ನಗರಸಭಾ ಸದಸ್ಯರಾಗಿರುವ ಸವಿತಾ ಹರೀಶ್ ರಾಮ್ ರವರು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಉಡುಪಿ ಶಕ್ತಿ ಕೇಂದ್ರ ಪ್ರಮುಖ್ ಮಹೇಶ್ ಪೂಜಾರಿ ಶಿರಿಬೀಡು ಹಾಗೂ ಸ್ಥಳೀಯ ಜಯಲಕ್ಷ್ಮಿ ಗುರುರಾಜ್ ಅಮೀನ್ ಉಪಸ್ಥಿತರಿದ್ದರು. ಉದ್ಘಾಟನೆಯನ್ನು ಮಾಡಿದ ಸವಿತಾ ಹರೀಶ್ ರಾಮ್ ಅವರು ಮಾತನಾಡಿ, ಜನಔಷಧಿ ಕೇಂದ್ರವು ಅದಿಉಡುಪಿ ಹಾಗೂ ಸಮೀಪದಲ್ಲಿರುವ ಊರುಗಳಿಗೆ ತುಂಬಾ ಅಗತ್ಯವಾಗಿ ಬೇಕಾಗಿರುವುದರಿಂದ ಇದೀಗ ಶುಭಾರಂಭ ಗೊಂಡಿರುವುದು ತುಂಬಾ ಸಂತೋಷವಾಗಿದೆ ಎಂದು ತಮ್ಮ ಮಾತಿನ ಮೂಲಕ ತಿಳಿಸಿದರು ಶಾಸಕ ಯಶ್ ಪಾಲ್ ಸುವರ್ಣರವರು ಜನಔಷದಿ ಕೇಂದ್ರಕ್ಕೆ ಆಗಮಿಸಿ ಅದರ ಮಾಲಕಿ ಆಗಿರುವ ಪ್ರಜ್ಞಾ ಆಚಾರ್ಯ ಇವರಿಗೆ ಶುಭವನ್ನು ಹಾರೈಸಿದರು. ಮಾಜಿ ಸೈನಿಕರ ವಿವಿದೊದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪರಮ ಶಿವರವರು ಹಾಗೂ ಶಿರಿಬೀಡು ವಾರ್ಡಿನ ನಗರಸಭಾ ಸದಸ್ಯರಾಗಿರುವ ಟಿ. ಜಿ. ಹೆಗ್ಡೆಯವರು ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಬಂದಿರುವ ಎಲ್ಲಾ ಮುಖ್ಯ ಅತಿಥಿಗಳಿಗೆ ಮಾಲೀಕರಾಗಿರುವ ಪ್ರಜ್ಞಾ ಆಚಾರ್ಯರವರು ಹೂ ಗುಚ್ಚ ನೀಡಿ ಸ್ವಾಗತಿಸಿದರು ಹಾಗೂ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿ ನೂತನ ಸಂಸ್ಥೆಗೆ ಶುಭ ಕೋರಿದರು.