ಸಿದ್ದಕಟ್ಟೆ: ಸಂಗಬೆಟ್ಟು,ಕರ್ಪೆ, ಅರಂಬೋಡಿ, ಎಲಿಯನಡುಗೋಡು, ಕುಕ್ಕಿಪಾಡಿ ಐದು ಗ್ರಾಮವನ್ನೊಳಗೊಂಡ ಬ್ರಹ್ಮ ಶ್ರೀ ನಾರಾಯಣಗುರು ಸ್ವಾಮೀ ಬಿಲ್ಲವ ಸಮಾಜ ಸೇವಾ ಸಂಘ ರಿ.ಇದರ 2025/2027 ಸಾಲಿನ ನೂತನ ಕಾರ್ಯಕಾರಿ ಸಮಿತಿ ಆಯ್ಕೆ ಪ್ರಕ್ರೀಯೆ ನಾರಾಯಣಗುರು ಸಭಾ ಭವನದಲ್ಲಿ ಹಿರಿಯ ಮುಖಂಡರಾದ ರಾಜ್ಯ ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಇವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ರಿ. ಗಾಣದಪಡ್ಪು ಇದರ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ, ಮತ್ತು ಉಪಾಧ್ಯಕ್ಷರಾದ ಜಯಪ್ರಕಾಶ್ ಜೆ ಎಸ್, ಯುವವಾಹಿನಿ ರಿ ಬಂಟ್ವಾಳ ಘಟಕದ ನಿಕಟಪೂರ್ವ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಉಪಸ್ಥಿತರಿದ್ದರು.
ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ದಿನೇಶ್ ಶಾಂತಿ ಹೆನ್ನೂರಪದವು ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು, ಕಾರ್ಯದರ್ಶಿ ಉಮೇಶ್ ಹಿಂಗಾಣಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು ಬಳಿಕ ಪಂಚಗ್ರಾಮದ ಸದಸ್ಯರ ಸಮ್ಮುಖದಲ್ಲಿ ಅವಿರೋಧವಾಗಿ 25ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿ ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಕಿರಣ್ ಕುಮಾರ್ ಮಂಜಿಲ, ಉಪಾಧ್ಯಕ್ಷರಾಗಿ ಸತೀಶ್ ಪೂಜಾರಿ ಅಲಕ್ಕೆ. ಉಪಾಧ್ಯಕ್ಷರಾಗಿ ನಿತ್ಯಾನಂದ ಪೂಜಾರಿ ಕೆಂತಲೆ, ಪ್ರಧಾನ ಕಾರ್ಯದಶಿಯಾಗಿ ರತ್ನಾಕರ ಪೂಜಾರಿ ಮದಂಗೋಡಿ ,
ಜೊತೆ ಕಾರ್ಯದರ್ಶಿಯಾಗಿ ರಮೇಶ್ ಪೂಜಾರಿ ಮಜಲು, ಕೋಶಾಧಿಕಾರಿಯಾಗಿ ಯೋಗೀಶ್ ಪೂಜಾರಿ ಕೆರ್ನಡೆ,ಹಾಗೂ ಕಾರ್ಯಕಾರಿಣಿ ಸಮಿತಿಯಲ್ಲಿ ದಾಮೋದರ ಪೂಜಾರಿ ದೋಟ, ಕೇಶವ ಪೂಜಾರಿ ಕುದ್ಕೊಳಿ, ಪ್ರೀತಿ ವಸಂತ್ ಹೆನ್ನೂರ ಪದವು, ಲೋಕೇಶ್ ಪೂಜಾರಿ ಸಂಗಬೆಟ್ಟು, ಪ್ರಭಾಕರ್ ಪೂಜಾರಿ ಪಾಲ್ಜಾಲ್, ಸುಧಾಮ ಉಪ್ಪಿರ, ಚಂದ್ರಶೇಖರ ಕೊಡಂಗೆ, ದೇವಪ್ಪ ಕರ್ಕೇರ ನೆಕ್ಕರೆಗುಳಿ, ವಾಮನ್ ಬುನ್ನಾನ್ ಕರ್ಪೆ, ಅಶೋಕ ಪೂಜಾರಿ ಕುಪ್ಪೆಟ್ಟು, ಡಾ.ಯೋಗೀಶ್ ಕೈರೋಡಿ, ಗಣೇಶ್ ಪೂಜಾರಿ ದೇವಸ, ಲಿಂಗಪ್ಪ ಪೂಜಾರಿ ಹಲಾಯಿ, ವಿನೋದ್ ಪೂಜಾರಿ ಸಿಕಾಯಿಗುಡ್ಡೆ, ಸತೀಶ್ ಪಾಡ್ಯಾರ್, ಸತೀಶ್ ರಾಗಂದಡಿ ಆರಂಬೋಡಿ, ಹರೀಶ್ ಕಲ್ಲಬೆಟ್ಟು, ಅಧಿತಿ ಚಂದ್ರಶೇಖರ್ ಅಡಮುಗೇರು ಹಾಗೂ ನಾಮನಿರ್ದೇಶನ ಸದಸ್ಯರಾಗಿ ಗೋಪಾಲ್ ಬಂಗೇರ, ಸುರೇಶ್ ಅಂಚನ್,ಜನಾರ್ಧನ ಬಂಗೇರ, ಅರುಣ್ ಎಂ ಮಂಜಿಲಾ, ಹರೀಶ್ ಹಿಂಗಾಣಿ, ಬೋಜ ಪೂಜಾರಿ ಅಮ್ಟಾಡಿ, ಪದ್ಮನಾಭ ಪೂಜಾರಿ ಅನೈದೋಡಿ, ವಿಶ್ವನಾಥ ಪೂಜಾರಿ ವಿಶ್ವಜೋತಿ, ಲಕ್ಷ್ಮಣ್ ಬಂಗೇರ ಮೊಯ್ಲೊಟ್ಟು, ದೇಜಪ್ಪ ಪೂಜಾರಿ, ಆನಂದ ಬೃಂದಾವನ, ಲೋಕೇಶ್ ಕಂಬಲದೋಡಿ ಇವರುಗಳನ್ನು ಆಯ್ಕೆ ಮಾಡಲಾಯಿತು.