

ವೇಣೂರು: ಭಾರೀ ಮಳೆಗೆ ವೇಣೂರು ಪರಿಸರದಲ್ಲಿ ಜಲ ಪ್ರಳಯವೇ ಸೃಷ್ಟಿಯಾಗಿದೆ. ಭಾರೀ ಮಳೆಗೆ ನೋಡನೋಡುತ್ತಿದ್ದಂತೆ ರಸ್ತೆಯಲ್ಲಿನ ನೀರು ಅಂಗಡಿಗಳಿಗೆ ನುಗ್ಗಿದ್ದು ಅಂಗಡಿ ಮಾಲೀಕರಿಗೆ ನಷ್ಟ ಸಂಭವಿಸಿದೆ.
ಹೆದ್ದಾರಿ ಇಕ್ಕೆಲಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಅಂಗಡಿಗಳಿಗೆ ನುಗ್ಗಲು ಕಾರಣ ಆಗಿದೆ. ಹಲವೆಡೆ ತೋಡು, ತೋಟಗಳು ಮುಳುಗಡೆ ಆಗಿದೆ. ಸಿಡಿಲಿಗೆ ಹಲವು ಮನೆಗಳ ವಿದ್ಯುತ್ ಕೆಟ್ಟು ಹೋಗಿದೆ. ಬೆಳ್ತಂಗಡಿ ತಾಲೂಕಿನ ಹಲವು ನದಿಗಳಲ್ಲೂ ಭಾರೀ ಪ್ರಮಾಣದ ನೀರು ಹರಿದು ಬಂದಿದ್ದು ಜನ ಭಯಭೀತಿಗೊಂಡಿದ್ದರು.