ಸುರತ್ಕಲ್: ಶ್ರೀ ಪುತ್ತಿಗೆ ಮಠ, ನವ ವ್ರಂದಾವನ ಸೇವಾ ಪ್ರತಿಷ್ಠಾನ, ಶ್ರೀ ಗುರು ರಾಘವೇಂದ್ರ ಮಠ ಇಲ್ಲಿ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 354ನೇ ಆರಾಧನಾ ಮಹೋತ್ಸವ ಹಾಗೂ ಶ್ರೀ ಕೃಷ್ಣ ಜಯಂತಿ, ಶ್ರೀ ಕೃಷ್ಣ ಲೀಲೋತ್ಸವ ಮತ್ತು ಶ್ರೀ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ಆ. 10ರಿಂದ 12ರವರೆಗೆ ಜರಗಲಿದೆ.
ಆ. 10ಕ್ಕೆ ಪೂರ್ವಾರಾಧನೆ, ಭಜನೆ, ಕೊಳಲು ವಾದನ, ಸಂಗೀತ ಕಾರ್ಯಕ್ರಮ, ಮಧ್ಯಾಹ್ನ ತಾಳಮದ್ದಲೆ, ಸಂಜೆ ರಂಗಪೂಜೆ, ಬಲಿ ಉತ್ಸವ ಜರಗಲಿದೆ. ಆ. 11ರಂದು ಮಧ್ಯಾರಾಧನೆ, ಉದಯರಾಗ, ಭಜನೆ, ತುಲಾಭಾರ ಸೇವೆ , ಸಂಜೆ ತಾಳಮದ್ದಲೆ ನಡೆಯಲಿದೆ. ಆ.12ರಂದು ಭಜನೆ, ನೃತ್ಯ, ಸಂಜೆ ಯಕ್ಷಗಾನ ಬಯಲಾಟ ನಡೆಯಲಿದೆ.