ಜೇಸಿಐ ಉಪ್ಪುಂದ ಪ್ರಾಂತ್ಯ ಎ, ವಲಯ 15: ಕಾಲೇಜು ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ ಕಾರ್ಯಕ್ರಮ

0
13

ಜೇಸಿಐ ಉಪ್ಪುಂದ ಪ್ರಾಂತ್ಯ ಎ, ವಲಯ 15, ಜೇಸಿಐ ಭಾರತ ಇವರ ಆಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೈಂದೂರು ಇವರ ಸಹಯೋಗದೊಂದಿಗೆ ಕಾಲೇಜು ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ ಕಾರ್ಯಕ್ರಮವು ಸರಕಾರಿ ಪ್ರಥಮದರ್ಜೆ ಕಾಲೇಜು, ಬೈಂದೂರು ನಡೆಯಿತು.

ಪೋಲಿಸ್ ವರಿಷ್ಠಾಧಿಕಾರಿಗಳು ಉಡುಪಿ ಜಿಲ್ಲೆ ಹರಿರಾಮ್ ಶಂಕರ್, ದೀಪ ಬೆಳಗಿದರು ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಿಗಳಾಗುತ್ತಿರುವುದು ಕಂಡು ಬರುತ್ತಿದೆ. ಇದರ ದುಷ್ಪರಿಣಾಮಗಳನ್ನು ಅರ್ಥಮಾಡಿಕೊಂಡು ಎಚ್ಚರಿಕೆಯಿಂದ ಬದುಕುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯವಾಗಿದೆ. ಗಾಂಜಾ ಸೇರಿದಂತೆ ಯಾವುದೇ ರೀತಿಯ ಮಾದಕ ಸೇವನೆಯ ಪ್ರಕರಣಕ್ಕೆ ನ್ಯಾಯಾಲಯದಲ್ಲಿ ಜಾಮೀನು ಸಿಗುವುದಿಲ್ಲ. ಜೈಲೇ ಗತಿಯಾಗುವುದು. ಈ ವಿಷಯದಲ್ಲಿ ಕಾಯ್ದೆ ಕಠಿಣವಾಗಿದೆ. ನಿಮ್ಮ ನಂಬಿದ ಇಡೀ ಕುಟುಂಬ ನೋವು ಅನುಭವಿಸಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಈ ದುಶ್ಚಟಗಳಿಂದ ದೂರವಿದ್ದು, ತಮ್ಮ ಸುತ್ತಮುತ್ತಲಿನಲ್ಲೂ ಈ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿ ಗೌರವಿಸಲಾಯಿತು. ಜೇಸಿಐ ಉಪ್ಪುಂದ ಅಧ್ಯಕ್ಷರಾಗಿರುವ ಭರತ್ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಜೆಸಿಐ ಸಂಸ್ಥೆ ಮಾನವೀಯ ಸೇವೆಗಳೊಂದಿಗೆ ವ್ಯಕ್ತಿತ್ವ ವಿಕಸನ ಹಾಗೂ ಜೀವನದ ಕಲೆಯನ್ನು ಕಲಿಸುವುದರ ಮುಖಾಂತರ ಸದೃಢ ಸಮಾಜ ನಿರ್ಮಾಣ ಮಾಡಲು ಕೈಜೋಡಿಸಿದೆ ಎಂದರು.

ಪೋಲಿಸ್ ವರಿಷ್ಠಾಧಿಕಾರಿಗಳು ಉಡುಪಿ ಜಿಲ್ಲೆ ಹರಿರಾಮ್ ಶಂಕರ್, ಅವರಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬಿ.ಎಸ್.ಸುರೇಶ ಶೆಟ್ಟಿ, ಮ್ಯಾನೇಜಿಂಗ್ ಟ್ರಸ್ಟಿ, ಜ್ಞಾನ ಸರಸ್ವತಿ ವಿದ್ಯಾಲಯ ಸಿದ್ದಾಪುರ ಮದನ್ ಕುಮಾರ್ ಮಾಜಿ ಸದಸ್ಯರು, ಜಿಲ್ಲಾ ಪಂಚಾಯತ್ ಉಡುಪಿ,ಶೇಖರ ಪೂಜಾರಿ, ಅಧ್ಯಕ್ಷರು, ಸರಕಾರಿ ನೌಕರ ಸಂಘ ಬೈಂದೂರು ವಲಯ ನಾಗರಾಜ ಶೆಟ್ಟಿ, ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು, ತಿಮ್ಮೇಶ್ ಬಿ ಎನ್ ಠಾಣಾಧಿಕಾರಿಗಳು ಬೈಂದೂರು ಪೋಲಿಸ್ ಠಾಣೆ,
ಶೇಖರ ಪೂಜಾರಿ, ಸದಸ್ಯರು, ಬೈಂದೂರು ತಾಲೂಕು ಕೆಡಿಪಿ, ಬೈಂದೂರು ಸೇನೆಶ್ವರ ದೇವಸ್ಥಾನದ ಆಡಳಿತ ಅಧ್ಯಕ್ಷರಾದ ಗಿರೀಶ್ ಬೈಂದೂರು ಜೇಸಿ ದಿವಾಕರ ಶೆಟ್ಟಿ ಸ್ಥಾಪಕಾದ್ಯಕ್ಷರು, ಸೀನಿಯರ್ ಛೇಂಬರ್ ಪೂರ್ವಾಧ್ಯಕ್ಷ ಪ್ರಭಾಕರ ಶೆಟ್ಟಿ, ಅಧ್ಯಕ್ಷರಾದ ಶ್ರಿಕಾಂತ ಶೆಟ್ಟಿ ಗಂಟಿಹೊಳೆಯವರು ಮಂಜುನಾಥ್ ಪೂಜಾರಿ ಸರ್ವ ಸದಸ್ಯರು ಉಪಸ್ಥಿತರಿದ್ದರು‌.

ನಿಕಟಪೂರ್ವ ಅಧ್ಯಕ್ಷ ಮಂಜುನಾಥ್ ದೇವಾಡಿಗ ಸ್ವಾಗತಿಸಿದರು. ಪ್ರಾಧ್ಯಾಪಕರು ನವೀನ್ ನಿರೂಪಿಸಿದರು. ಅಭಿಷೇಕ್ ಕಾರ್ಯದರ್ಶಿ ವಂದಿಸಿದರು.

LEAVE A REPLY

Please enter your comment!
Please enter your name here