ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ, 125 ವರ್ಷದ ಭಜನಾ ಸಪ್ತಾಹ ಅಂಗವಾಗಿ ಬುಧವಾರ ನಗರ ಭಜನೆ ಜರಗಿತು. ದೇವಾಲಯದಿಂದ ಹೊರಟು ನಗರದ ಮುಖ್ಯ ರಸ್ತೆಯಾದ ಹಳೇ ಡಯಾನ ಸರ್ಕಲ್ , ಕೆ ಎಮ್ ಮಾರ್ಗ , ತ್ರಿವೇಣಿ ಸರ್ಕಲ್, ಸಿಟಿ ಬಸ್ ಸ್ಟಾಂಡ್, ಶ್ರೀ ಶಂಕರ ನಾರಾಯಣ ದೇವಸ್ಥಾನದಲ್ಲಿ ಭಜನೆ ಮಾಡಿ, ಬಡಗುಬೆಟ್ಟು , ರಥಬೀದಿಯಾಗಿ ದೇವಳವನ್ನು ತಲುಪಿತು.
ಭಜನಾ ಮಂಡಳಿಯ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ, ಭಾಸ್ಕರ್ ಶೆಣೈ, ಅರವಿಂದ ಭಟ್, ಸತೀಶ್ ನಾಯಕ್, ಪ್ರಭಾಕರ್ ಭಟ್, ಜಿ ಎಸ್ ಬಿ ಯುವಕ ಮಂಡಳಿ ಸದಸ್ಯರು ಉಪಸ್ಥರಿದ್ದರು.