ಮೂಡುಬಿದಿರೆ ವಿಶ್ವ ವಿದ್ಯಾಲಯ ಕಾಲೇಜು: ವಿದ್ಯಾರ್ಥಿ ತರಬೇತಿ ಕಾರ್ಯಾಗಾರ

0
29

ಮಂಗಳೂರು ವಿಶ್ವವಿದ್ಯಾಲಯದ ಆಡಳಿತಕ್ಕೊಳ ಪಟ್ಟ ಮೂಡುಬಿದಿರೆ ಬನ್ನಡ್ಕದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಆಗಸ್ಟ್ 6 ರಂದು ಎಲ್ಲ ವಿದ್ಯಾರ್ಥಿಗಳಿಗೆ ಯಶಸ್ವೀ ಬದುಕಿನ ತರಬೇತಿ ಕಾರ್ಯಾಗಾರ ನಡೆಯಿತು. ಕಾರ್ಯಗಾರದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತಿದಾರ, ರಾಜ್ಯ ಸಂಪನ್ಮೂಲ ವ್ಯಕ್ತಿ, ಪತ್ರಿಕಾ ವರದಿಗಾರ ರಾಯಿ ರಾಜಕುಮಾರ ಮೂಡುಬಿದಿರೆ ಯವರು ಆಗಮಿಸಿದ್ದರು.
ಸಮಯ, ಸಂದರ್ಭಗಳು ಎಂಥವೇ ಇದ್ದರೂ ಎದೆಗುಂದದೆ ಧೈರ್ಯದಿಂದ, ಜಾಣ್ಮೆ ಯೊಂದಿಗೆ ಸಮರ್ಥವಾಗಿ ಎದುರಿಸಬೇಕು. ಕಲಿಕೆಯ ಸಂದರ್ಭದಲ್ಲಿ ಎಷ್ಟು ಸಾಧ್ಯವೋ ಅಷ್ಟು ವೈವಿಧ್ಯಮಯ, ಪ್ರಾಯೋಗಿಕ ಕಲಿಕೆ ಗೈದು ಪ್ರಾವೀಣ್ಯತೆ ಪಡೆದು ಬೆಳೆಯಬೇಕು. ದಿನನಿತ್ಯದ ಚಿಕ್ಕ ಚಿಕ್ಕ ಸಂಗತಿಗಳ ಸಂಪೂರ್ಣ ಪರಿಜ್ಞಾನವನ್ನು ಬೆಳೆಸಿಕೊಂಡಷ್ಟು, ಪ್ರಶ್ನೆಗೆ ಉತ್ತರಗಳನ್ನು ಕಂಡುಕೊಂಡಷ್ಟೂ, ನಮ್ಮ ಜ್ಞಾನದ ಹರವು ವಿಸ್ತಾರಗೊಳ್ಳುತ್ತಾ ಹೋಗುತ್ತದೆ ಎಂದು ಹಲವಾರು ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಡಾ. ಅಜಿತ್ ಕುಮಾರ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಉದಯ್ ಮತ್ತು ನಿಖಿತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚೇತನ್ ಸ್ವಾಗತಿಸಿದರು. ಅಕ್ಷತಾ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಸುಕನ್ಯ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here