ಪುತ್ತೂರು: ಗ್ರಾಹಕ ಶಿಕ್ಷಣ, ಅಂಚೆಚೀಟಿ ಮಾಹಿತಿ ಕಾರ್ಯಾಗಾರ

0
99


ದ.ಕ.ಜಿಲ್ಲಾ ಪುತ್ತೂರು ತಾಲೂಕಿನ ಸಂತ ವಿಕ್ಟರ್ ಹೆಮ್ಮಕ್ಕಳ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಆಗಸ್ಟ್ 9ರಂದು ಗ್ರಾಹಕ ಶಿಕ್ಷಣ ಹಾಗೂ ಅಂಚೆಚೀಟಿ ಸಂಗ್ರಹಣಾ ಮಾಹಿತಿ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ, ದ.ಕ.ಜಿಲ್ಲಾ ಗ್ರಾಹಕ ಸಂಘಟನಾ ಒಕ್ಕೂಟದ ಜತೆ ಕಾರ್ಯದರ್ಶಿ, ಪತ್ರಿಕಾ ವರದಿಗಾರ ರಾಯಿ ರಾಜಕುಮಾರ ಮೂಡುಬಿದಿರೆ ಯವರು ಆಗಮಿಸಿದ್ದರು.
ಅವರು ತಮ್ಮ ಗ್ರಾಹಕ ಶಿಕ್ಷಣ ಕಾರ್ಯಾಗಾರದಲ್ಲಿ ಗ್ರಾಹಕರ ಹಕ್ಕು, ಹಿತರಕ್ಷಣೆ, ಕರ್ತವ್ಯ, ಜವಾಬ್ದಾರಿ, ಯಾವುದೇ ಸಂಸ್ಥೆ ಅಥವಾ ಇಲಾಖೆಯ ಲೋಪದೋಷ, ತೊಂದರೆ, ತಕರಾರು ಬಂದಾಗ ಪರಿಹಾರಕ್ಕಾಗಿ ವಹಿಸಬೇಕಾದ ಮಾರ್ಗೋಪಾಯಗಳನ್ನು, ದಾಖಲೆಗಳನ್ನು ಜೋಡಿಸಿಡುವ ಅಗತ್ಯ ತಿಳಿಹೇಳಿದರು.
ಇದೇ ಸಂದರ್ಭದಲ್ಲಿ ಅವರ ಅಂಚೆಚೀಟಿ ಸಂಗ್ರಹದ ಪ್ರದರ್ಶನವೂ ನಡೆಯಿತು. ಶಿಕ್ಷಕರು , ವಿದ್ಯಾರ್ಥಿಗಳು ಸಂಗ್ರಹಣೆಯ ವಿಧಾನ ತಿಳಿದುಕೊಂಡರು. ತರುವಾಯ ನಡೆದ ಅಂಚೆಚೀಟಿ ಸಂಗ್ರಹಣಾ ಮಾಹಿತಿ ಕಾರ್ಯಾಗಾರದಲ್ಲಿ ದಿನವಹಿ, ವಿಷಯವಹಿ, ಸಂಗ್ರಹಣೆ ಮತ್ತು ನಾಣ್ಯ, ನೋಟು ಸಂಗ್ರಹಣೆಯ ಅಗತ್ಯದ ಬಗೆಗೆ ಮನದಟ್ಟು ಮಾಡಿಸಿದರು.
ಶಾಲಾ ಮುಖ್ಯ ಶಿಕ್ಷಕಿ ರೋಸಲಿನ್ ಫ್ಲೇವಿ ಲೋಬೋ ಅಧ್ಯಕ್ಷತೆ ವಹಿಸಿದ್ದು ಗ್ರಾಹಕ ಮಾಹಿತಿಯ ಅಗತ್ಯವನ್ನು ತಿಳಿಸಿದರು . ಶಿಕ್ಷಕ ರೋನಾಲ್ಡ್ ಮೋನಿಸ್ ಕಾರ್ಯಕ್ರಮ ಸಂಯೋಜಿಸಿದ್ದರು. ಶಿಕ್ಷಕಿ ಅನುಷಾ ಅತಿಥಿಗಳ ಪರಿಚಯ ಮಾಡಿದರು. ಕ್ಲಬ್ ನ ಅಧ್ಯಕ್ಷೆ ಫಾತಿಮತ್ ಶೈಫಾ ವೇದಿಕೆಯಲ್ಲಿ ಹಾಜರಿದ್ದರು. ವಿದ್ಯಾರ್ಥಿನಿಯರಾದ ಶಂಸಿಯಾ ಸ್ವಾಗತಿಸಿದರು. ಭವ್ಯ ಕಾರ್ಯಕ್ರಮ ನಿರ್ವಹಿಸಿದರು. ಹಲೀಮಾ ಹಫೀಫಾ ವಂದಿಸಿದರು.

LEAVE A REPLY

Please enter your comment!
Please enter your name here