ಮೂಡುಬಿದಿರೆ: ಜೈನ ಕಾಶಿಯ 18 ಬಸದಿಗಳಲ್ಲಿ ವಿಶೇಷ ಪೂಜೆ ಹವನ

0
20

ಮೂಡುಬಿದಿರೆ: ನೂಲ ಹುಣ್ಣಿಮೆ ಶ್ರಾವಣದ ದಿನ ಆಚರಿಸುವ ರತ್ನತ್ರ ಯ ಸೂತ್ರ ಧರಿಸುವ ಹಬ್ಬ ಇಂದು 09.08.2025 ಶನಿವಾರ ಮೂಡುಬಿದಿರೆ ಜೈನ ಕಾಶಿಯ 18 ಬಸದಿಗಳಲ್ಲಿ ವಿಶೇಷ ಪೂಜೆ ಹವನ ಮೂಲಕ ಶ್ರಾವಕ ರು ರತ್ನತ್ರಯಸೂತ್ರ ಧರಿಸಿದರು. ಆಚಾರ್ಯ ಗುಲಾಬ್ ಭೂಷಣ ಮುನಿರಾಜ್ ಉಪಸ್ಥಿತರಿದ್ದರು. ಧರ್ಮ ನಿರತರದವರಿಗೆ ರಕ್ಷಣೆ ನೀಡುವ ಭಾವನೆ ಮಾಡುವ ದಿನ ಎಂದು ಇಂದು ಶ್ರೀ ಮಠದಲ್ಲಿ ಹವನದ ಬಳಿಕ ಜನಿವಾರ ಧಾರಣೆ ಸಂಧರ್ಭ ಮೂಡುಬಿದಿರೆ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯ ವರ್ಯ ಮಹಾ ಸ್ವಾಮೀಜಿ ತಮ್ಮ ಅನುಗ್ರಹ ಆಶೀರ್ವಾದ ದಲ್ಲಿ ತಿಳಿಸಿದರು. ಅಪರಾಹ್ನ ಶ್ರೀ ಮಠ ಬಳಿ ಶಾಂತಿ ಭವನದಲ್ಲಿ ಶಾಂತಿ ಚಕ್ರ ಆರಾಧನೆಯ 16ನೇ ಆರಾಧನೆ ಸಮಾಪನಗೊಂಡಿತು ಆಚಾರ್ಯರ ಭಟ್ಟಾರಕರ ಪಾದ ಪೂಜೆ ಆರತಿ ಮಾಡಿ ಭಕ್ತ ವ್ರoದ ಧರ್ಮ ಲಾಭ ಗಳಿಸಿದರು. ಅಭಯ ಚಂದ್ರ ಜೈನ್,
ತಿಲಕ್ ಪ್ರಸಾದ್, ದರ್ಶನ್ ಶೆಟ್ಟಿ, ಸಂಜಯಂತ ಕುಮಾರ್, ಸುದೇಶ್ ಬೆಟ್ ಕೇರಿ,ಶ್ವೇತಾ ಜೈನ್ ಸೂರಜ್,ಮೊದಲಾದವರು ಉಪಸ್ಥಿತರಿದ್ದರು. ಇಂದು ಉ.ಪ್ರ, ಮಹಾರಾಷ್ಟ್ರ, ಮ.ಪ್ರ ಇಂದೂರಿನ ನೂರಾರು ಸಂಖ್ಯೆ ಯ ಭಕ್ತರು ಶ್ರೀ ಗಳಿಂದ ಜನಿವಾರ ಹಾಗೂ ರಕ್ಷಾ ಸೂತ್ರ ಪಡೆದರು.

LEAVE A REPLY

Please enter your comment!
Please enter your name here