ಮೂಡುಬಿದಿರೆ: ಮುದ್ದು ಕೃಷ್ಣ ವೇಷ ಸ್ಪರ್ಧೆ ಉದ್ಘಾಟನೆ

0
12

ಮೂಡುಬಿದಿರೆ ಗೋಪಾಲಕೃಷ್ಣ ದೇವಾಲಯದ ಮೋಸರು ಕುಡಿಕೆ ಉತ್ಸವಕ್ಕೆ ಪೂರಕವಾಗಿ 34ನೇ ವರ್ಷದ ಮುದ್ದುಕೃಷ್ಣ ವೇಷ ಸ್ಪರ್ಧೆ ಸಮಾಜ ಮಂದಿರದಲ್ಲಿ ಆಗಸ್ಟ್ ಹತ್ತರಂದು ನಡೆಯಿತು. ಸ್ಪರ್ಧಾ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ದ.ಕ.ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ, ಸಾಮಾಜಿಕ ಮುಂದಾಳು ಸುದರ್ಶನ್ ಎಂ ಮಾತನಾಡಿ ಮಕ್ಕಳು ಕೃಷ್ಣನಂತೆ ಬಹಳ ಚಟುವಟಿಕೆಯಿಂದ ಕೂಡಿರುತ್ತಾರೆ. ಅಂತಹ ಮಕ್ಕಳಿಗೆ ಉತ್ತಮ ಸಂಸ್ಕೃತಿಯೊಂದಿಗೆ, ಸಂಸ್ಕಾರವನ್ನು ಕಲಿಸಿದರೆ ಅವರ ಭವಿಷ್ಯ ಉಜ್ವಲವಾಗಿ ಬೆಳಗುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ವೇದಿಕೆಯಲ್ಲಿ ಕೃಷ್ಣ ಫ್ರೆಂಡ್ಸ್ ಅಧ್ಯಕ್ಷ ಸಂತೋಷ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸುಶಾಂತ್ ಕರ್ಕೇರ, ಸಂಚಾಲಕ ಸುರೇಶ್ ರಾವ್, ಶ್ರೇಷ್ಠ ಕಲಾವಿದರು ತೀರ್ಪುಗಾರರಾದ, ಮಹೇಶ್, ರಮ್ಯ ಸುಧೀಂದ್ರ ಹಾಜರಿದ್ದರು. ಶಿವಾನಂದ ಶಾಂತಿ, ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ತರುವಾಯ ಒಂದರಿಂದ ಎರಡು ವರ್ಷ, 2 ರಿಂದ 4 ವರ್ಷ, ನಾಲ್ಕರಿಂದ ಆರು ವರ್ಷದ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here